ಇಂಡಿಯಾ ಮೈತ್ರಿಕೂಟ ಸಭೆ: ಲಾಲೂ ನಿತೀಶ್‌ ದೂರಾದೂರ

masthmagaa.com:

ಪ್ರತಿಪಕ್ಷಗಳ ಮೈತ್ರಿಕೂಟ ʻಇಂಡಿಯಾʼ ಸಭೆಯಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಫೇಸ್‌ಗೆ ಕಾಂಗ್ರೆಸ್‌ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವ್ರ ಹೆಸರನ್ನ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೂಚಿಸಿದ್ರು. ಇದೀಗ ಈ ಪ್ರಸ್ತಾಪಕ್ಕೆ ಬಿಹಾರ್‌ ಸಿಎಂ ನಿತೀಶ್‌ ಕುಮಾರ್‌ ಹಾಗೂ‌ RJD ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್ ಅಪ್‌ಸೆಟ್‌ ಆಗಿರೋ ವಿಷಯ ತಿಳಿದು ಬಂದಿದೆ. ಇಬ್ಬರೂ ಈ ಪ್ರಸ್ತಾವನೆಯಿಂದ ಅಸಮಾಧಾನ ಹೊರಹಾಕಿದ್ದು, ಪಕ್ಷ ಸಭೆ ಬಳಿಕ ದಿಢೀರ್‌ ಅಂತ ಹೋಗಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ. ಇನ್ನೊಂದ್‌ ಕಡೆ ಮಮತಾ ಬಿಜೆಪಿ ಜೊತೆಯಿದ್ದು ಇಂಡಿಯಾ ಅನ್ನೊ ದೋಣಿಯನ್ನ ಮುಳುಗಿಸೋಕೆ ಮುಂದಾಗಿದ್ದಾರೆ ಅಂತ CPI (M) ನಾಯಕ ಮೊಹಮ್ಮದ್‌ ಸಲೀಂ ಆರೋಪಿಸಿದ್ದಾರೆ. ʻಒಂದ್‌ ಕಡೆ ಇಂಡಿಯಾ ಸಭೆಯಲ್ಲಿ ಭಾಗಿಯಾಗ್ತಾರೆ, ಮತ್ತೊಂದ್‌ ಕಡೆ ಮೋದಿ ಬಳಿ ದಾದಾ ಅಂತ ಮಾತಾಡ್ತಾರೆ. ಪಿಎಂ ಫೇಸ್‌ಗೆ ಖರ್ಗೆ ಹೆಸರು ಹೇಳೊದು, 31 ಕ್ಕೆ ಸೀಟ್‌ ಶೇರಿಂಗ್‌ ಅಂತಿಮ ಮಾಡಿ ಅಂತ ಗಡುವು ನೀಡೋದು ಅವರ ಗೇಮ್‌ ಭಾಗವಾಗಿದೆ. ಇಂಥವ್ರಿಂದ ಹುಷಾರಾಗಿ ಇರ್ಬೇಕುʼ ಅಂತ ಹೇಳಿದ್ದಾರೆ.

ಇನ್ನೊಂದ್‌ ಕಡೆ ಇದೇ ಸಭೆಯಲ್ಲಿ, ಪ್ರಧಾನಿ ಮೋದಿ ಕ್ಷೇತ್ರವಾದ ವಾರಣಸಿಯಲ್ಲಿ ಯಾರನ್ನ ಕಣಕ್ಕಿಳಿಸಬೇಕು ಅನ್ನೊದಕ್ಕೂ ದೀದಿ ಹೆಸರನ್ನ ಸೂಚಿಸಿದ್ದಾರೆ ಅಂತ ತಿಳಿದು ಬಂದಿದೆ. ಪ್ರಧಾನಿ ವಿರುದ್ಧ ಅವ್ರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜನರಲ್‌ ಸೆಕ್ರಟರಿ ಪ್ರಿಯಾಂಕ ಗಾಂಧಿ ವಾದ್ರಾ ಸ್ಪರ್ಧಿಸಬೇಕು ಅಂತ ಮಮತಾ ಪ್ರಸ್ತಾಪ ಮುಂದಿಟ್ಟಿದ್ದಾರೆ ಅಂತ ತಿಳಿದು ಬಂದಿದೆ. ಇನ್ನು 2019ರಲ್ಲೂ ಮೋದಿ ವಿರುದ್ಧ ವಾರಣಾಸಿಯಲ್ಲಿ ಪ್ರಿಯಾಂಕ ಗಾಂಧಿ ವಾದ್ರಾ ಸ್ಪರ್ಧೆ ಮಾಡ್ತಾರೆ ಅನ್ನೊ ಮಾತುಗಳು ಕೇಳಿ ಬಂದಿದ್ವು. ಆದ್ರೆ ಕೊನೆಗೆ ಕಾಂಗ್ರೆಸ್‌ ಅಜಯ್‌ ರಾಯ್‌ ಅವ್ರನ್ನ ಕಣಕ್ಕಿಳಿಸಿತ್ತು. ಅಂದ್ಹಾಗೆ ವಾರಣಾಸಿ 1991ರಿಂದ 2004 ಅವಧಿ ಬಿಟ್ಟು ಪ್ರತಿ ಬಾರಿ ಬಿಜೆಪಿಗೆ ವೋಟ್‌ ಮಾಡ್ತಾ ಬಂದಿದೆ. ಇದೇ ಕ್ಷೇತ್ರ 2014 ಹಾಗೂ 2019ರಲ್ಲಿ ಮೋದಿಯನ್ನ ಲೋಕಸಭೆಗೆ ಕಳಿಸಿದೆ. ಇನ್ನೊಂದ್‌ ಕಡೆ ಇಂಡಿಯಾ ಸಭೆಯಲ್ಲಿ ಕೇವಲ ಚಾ ಕೊಟ್ಟಿದ್ದಾರೆ, ಸಮೋಸಾ ಕೊಟ್ಟಿಲ್ಲ ಅಂತ ಜೆಡಿಯು ನಾಯಕ ಸುನೀಲ್‌ ಕುಮಾರ್‌ ಪಿಂಟು ಅಸಮಾಧಾನ ಹೊರ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply