ಅವಧಿಪೂರ್ವ ಮಗು ಜನನ: ಟಾಪ್‌ 5 ದೇಶಗಳಲ್ಲಿ ಭಾರತವೂ ಒಂದು

masthmagaa.com:

ವಿಶ್ವದಲ್ಲಿ ಪ್ರತಿ ಸೆಕೆಂಡಿಗೆ ಒಂದು ಮಗು ಜನಿಸುತ್ತದೆ ಅದೇ ರೀತಿ ಪ್ರತಿ 40 ಸೆಕೆಂಡಿಗೆ ಒಂದು ಮಗು ಸಾವನ್ನಪ್ಪುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಅವಧಿಪೂರ್ವ ಶಿಶುಗಳ ಜನನ ಹೆಚ್ಚಾಗ್ತಿದೆ ಅಂತ ವಿಶ್ವಸಂಸ್ಥೆ ರಿಲೀಸ್‌ ಮಾಡಿರುವ ಹೊಸ ವರದಿಯಿಂದ ತಿಳಿದು ಬಂದಿದೆ. 2020ರಲ್ಲಿ ಗರ್ಭಧಾರಣೆ ಆಗಿ 37ನೇ ವಾರಕ್ಕೂ ಮೊದಲೇ ಸುಮಾರು 13.4 ಕೋಟಿ ಮಕ್ಕಳು ಜನಿಸಿವೆ. ಇದೇ ವೇಳೆ ಸುಮಾರು 10 ಲಕ್ಷ ಮಕ್ಕಳು ಸಾವನ್ನಪ್ಪಿವೆ ಅಂತ ವರದಿಯಲ್ಲಿ ತಿಳಿಸಲಾಗಿದೆ. ಅಲ್ದೆ ಈ ರೀತಿ ಅವಧಿಗಿಂತ ಮುಂಚೆಯೇ ಮಗು ಜನಿಸುವ ಟಾಪ್‌ ಐದು ದೇಶಗಳಲ್ಲಿ ಭಾರತ ಕೂಡ ಒಂದಾಗಿದೆ. ಪ್ರಪಂಚದಲ್ಲಿ 45% ಮಕ್ಕಳು ಬೇಗನೇ ಜನಿಸುತ್ತಿವೆ. ಈ ರೀತಿ ಅವಧಿಪೂರ್ವ ಜನನದಿಂದ ಶಿಶು ಮರಣ ದರ ಕೂಡ ಹೆಚ್ಚಾಗ್ತಿರೋದು ಮಕ್ಕಳ ಆರೋಗ್ಯ ಎಮರ್ಜನ್ಸಿಯನ್ನ ತೋರಿಸುತ್ತೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂದ್ಹಾಗೆ ಭಾರತ, ಪಾಕಿಸ್ತಾನ, ನೈಜೀರಿಯಾ, ಚೀನಾ, ಹಾಗೂ ಇಥಿಯೋಫಿಯಾದಲ್ಲಿ ಅವಧಿಪೂರ್ವ ಶಿಶುಗಳ ಜನನ ಹೆಚ್ಚಿದೆ ಅಂತ ವರದಿಯಲ್ಲಿ ಹೇಳಲಾಗಿದೆ.

-masthmagaa.com

Contact Us for Advertisement

Leave a Reply