ಪಕ್ಷಪಾತ ಮಾಡ್ಬೇಡಿ Facebook, Googleಗೆ INDIA ಬ್ಲಾಕ್‌ ಪತ್ರ!

masthmagaa.com:

ಸಾಮಾಜಿಕ ಜಾಲತಾಣದ ಬಹುದೊಡ್ಡ ಕಂಪನಿಗಳಾದ ಫೇಸ್‌ಬುಕ್‌, ವಾಟ್ಸ್ಯಾಪ್‌, ಯುಟ್ಯೂಬ್‌ ಮೂಲಕ ಸಮಾಜದಲ್ಲಿ ಕೋಮು ದ್ವೇಷವನ್ನು ಬೆಂಬಲಿಸಲಾಗುತ್ತಿದೆ ಎಂದು ಇಂಡಿಯಾ ಬ್ಲಾಕ್‌ ಆರೋಪಿಸಿದೆ. 2024 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ, ಮೆಟಾ ಸಿಇಒ ಮಾರ್ಕ್‌ ಜು಼ಕರ್‌ಬರ್ಗ್‌ ಮತ್ತು ಗೂಗಲ್‌ ಸಿಇಒ ಸುಂದರ್‌ ಪಿಚೈ ಅವರಿಗೆ ಇಂಡಿಯಾ ಬ್ಲಾಕ್‌ ಪತ್ರವನ್ನು ಬರೆದಿದೆ. ಪತ್ರದಲ್ಲಿ ಮೆಟಾ ಮತ್ತು ಗೂಗಲ್‌ ಸಿಇಒ ಗಳನ್ನು ಉದ್ದೇಶಿಸಿ, ಅವರ ಸೋಶಿಯಲ್‌ ಮೀಡಿಯಾ ಪ್ಲ್ಯಾಟ್‌ಫಾರ್ಮ್‌ಗಳು ಭಾರತದಲ್ಲಿ ಕೋಮು ದ್ವೇಷವನ್ನು ಬೆಂಬಲಿಸುತ್ತಿವೆ. ಆದ್ದರಿಂದ ಈ ಪ್ಲ್ಯಾಟ್ಫಾ‌ರ್ಮ್‌ಗಳಲ್ಲಿ ಪಕ್ಷಪಾತ ನಡೆಸದೇ ಎಲ್ಲವನ್ನೂ ಸಮಾನವಾಗಿ ನೋಡುವಂತೆ ಆಗ್ರಹಿಸಿದೆ. ಈ ಕುರಿತು ಸಂಪೂರ್ಣವಾದ ತನಿಖೆ ನಡೆಸಿ, ಸಾಮಾಜದಲ್ಲಿ ಅಶಾಂತಿ ಮೂಡುವಲ್ಲಿ ಒತ್ತು ನೀಡುತ್ತಿರುವ ಮೆಟಾ ಕಂಪನಿಯ ವಿರುದ್ಧ ವಾಷಿಂಗ್ಟನ್‌ ಪತ್ರಿಕೆಯು ಪ್ರಕಟಿಸಿದ್ದ ಬರವಣಿಗೆಯನ್ನು ಇಂಡಿಯಾ ಬ್ಲಾಕ್‌ ಪೋಸ್ಟ್‌ ಮಾಡಿದೆ. ಪತ್ರಿಕೆಯಲ್ಲಿ, ಫೇಸ್‌ಬುಕ್‌, ವಾಟ್ಸ್ಯಾಪ್‌ ಮತ್ತು ಯುಟ್ಯೂಬ್‌ ಕಂಪನಿಗಳು ಭಾರತದ ಆಡಳಿತ ಪಕ್ಷ ಬಿಜೆಪಿ ಮತ್ತು ನರೇಂದ್ರ ಮೋದಿಯವರ ವಿಷಯದಲ್ಲಿ ಪಕ್ಷಪಾತ ನಡೆಸಲಾಗುತ್ತಿವೆ ಎಂಬ ವಿಚಾರವನ್ನ ಹೇಳಲಾಗಿದೆ. ವಾಷಿಂಗ್ಟನ್‌ ಪತ್ರಿಕೆಯ ಈ ಬರವಣಿಗೆಯನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮಾರ್ಕ್‌ ಜು಼ಕರ್‌ಬರ್ಗ್‌ ಅವರಿಗೆ ʼXʼನಲ್ಲಿ ಶೇರ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply