ಭಾರತೀಯ ಪತ್ರಕರ್ತರು ನಮ್ಮ ಕುಟುಂಬದವರಿದ್ದಂಗೆ: ಚೀನಾ

masthmagaa.com:

ಚೀನಾದಲ್ಲಿ ಭಾರತೀಯ ಪತ್ರಕರ್ತರು ವರದಿ ಮಾಡಲು ಚೀನಾ ಅಧಿಕಾರಿಗಳು ಅನುವು ಮಾಡಿಕೊಡ್ತಾರೆ ಅನ್ನೋ ಭರವಸೆಯಿದೆ ಅಂತ ಭಾರತ ಹೇಳಿದೆ. ರಜೆಗೆ ಅಂತ ಚೀನಾದಿಂದ ಭಾರತಕ್ಕೆ ಆಗಮಿಸಿದ್ದ ಇಬ್ಬರು ಭಾರತೀಯ ಪತ್ರಕರ್ತರ ವೀಸಾಗಳನ್ನ ಚೀನಾ ತಡೆಹಿಡಿದಿತ್ತು. ಈ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್‌ ಬಗ್ಚಿ ಪ್ರತಿಕ್ರಿಯಿಸಿದ್ದಾರೆ. ಭಾರತದಲ್ಲಿ ಚೀನಾ ಪತ್ರಕರ್ತರು ವರದಿ ಮಾಡೋದ್ರಿಂದ ನಮಗೆ ಸಮಸ್ಯೆಯಿಲ್ಲ. ಅದೇ ರೀತಿ ಚೀನಾದಿಂದ ವರದಿ ಮಾಡುವ ಭಾರತೀಯ ಪತ್ರಕರ್ತರಿಗೆ ಚೀನಾ ಅಧಿಕಾರಿಗಳು ಅವಕಾಶ ಮಾಡಿಕೊಡ್ತಾರೆ ಅನ್ನೋ ನಂಬಿಕೆಯಿದೆ. ಈ ನಿಟ್ಟಿನಲ್ಲಿ ನಾವು ಚೀನಾ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆ ಅಂತ ಹೇಳಿದ್ದಾರೆ. ಇನ್ನು ಆ ಕಡೆ ಚೀನಾ ಸಹ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಭಾರತೀಯ ಪತ್ರಕರ್ತರನ್ನ ನಮ್ಮ ಫ್ರೆಂಡ್‌ ಮತ್ತು ಫ್ಯಾಮಿಲಿ ರೀತಿಯಲ್ಲಿ ನೋಡಿಕೊಳ್ತೀವಿ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply