ನೂತನ ಸಂಸತ್‌ ಕಟ್ಟಡದ ʻಮುರಾಲ್‌ʼ ವಿವಾದಕ್ಕೆ ತೆರೆ ಎಳೆದ ವಿದೇಶಾಂಗ ಸಚಿವಾಲಯ!

masthmagaa.com:

ನೂತನ ಸಂಸತ್‌ ಕಟ್ಟಡದಲ್ಲಿರುವ ಅಖಂಡ ಭಾರತವನ್ನ ಸೂಚಿಸುವ ʻಮುರಾಲ್‌ʼ ಮ್ಯಾಪ್‌ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿರುವ ನೇಪಾಳ ಹಾಗೂ ಪಾಕಿಸ್ತಾನಕ್ಕೆ ಭಾರತ ಸ್ಪಷ್ಟತೆ ನೀಡಿದೆ. ನೂತನ ಸಂಸತ್‌ ಭವನದಲ್ಲಿರುವ ಈ ಕಲಾಕೃತಿ ಕೇವಲ ಇತಿಹಾಸದ ಮೌರ್ಯ ಚಕ್ರವರ್ತಿ ಅಶೋಕನ ಸಾಮ್ರಾಜ್ಯದ ಹರಡುವಿಕೆಯನ್ನ ಮಾತ್ರ ತೋರಿಸುತ್ತೆ ಅಂತ ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ, ನೇಪಾಳ ಪ್ರಧಾನಿ ಪುಷ್ಪ ಕಮಲ್‌ ಅವ್ರು ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆಯಲ್ಲಿ ಮಾತುಕತೆ ನಡೆಸುವ ವೇಳೆ ಈ ಚಿತ್ರವನ್ನ ಹಾಕಲಾಗಿಲ್ಲ ಅಂತ ತಿಳಿಸಿದ್ದಾರೆ. ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ನೇಪಾಳದಲ್ಲಿ ಪ್ರತಿಭಟನೆ ಆಗ್ತಿರೋ ಬಗ್ಗೆ ನನಗೆ ಗೊತ್ತಿಲ್ಲ. ಜೊತೆಗೆ ಪಾಕಿಸ್ತಾನದಲ್ಲಿ ಯಾವುದೇ ಅಧಿಕೃತ ಪ್ರತಿಭಟನೆಯನ್ನು ಸಹ ನಾನು ನೋಡಿಲ್ಲ ಅಂತ ಬಾಗ್ಚಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply