ಚೀನಾ ಹಿಂದಿಕ್ಕಿ UNನ ಸಂಖ್ಯಾ ಆಯೋಗಕ್ಕೆ ಆಯ್ಕೆಯಾದ ಭಾರತ!

masthmagaa.com:

ವಿಶ್ವಸಂಸ್ಥೆಯ Statistical Commission ಅಥ್ವಾ ಸಂಖ್ಯಾ ಆಯೋಗಕ್ಕೆ ಮುಂದಿನ 4 ವರ್ಷಗಳ ಕಾಲ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗಿದೆ. ಈ ಕುರಿತು ನಡೆದ ಚುನಾವಣೆಯಲ್ಲಿ ಚೀನಾ, ದಕ್ಷಿಣ ಕೊರಿಯಾ, ಯುಎಇಯನ್ನ ಭಾರತ ಹಿಂದಕ್ಕಿದೆ. ಒಟ್ಟು 46 ಮತಗಳನ್ನ ಭಾರತ ಗಳಿಸಿದ್ರೆ, ದಕ್ಷಿಣ ಕೊರಿಯಾ 23, ಚೀನಾ 19 ಹಾಗೂ ಯುಎಇ 15 ಮತಗಳನ್ನ ಗಳಿಸಿವೆ. ಇನ್ನು 2024 ಜನವರಿ 1 ರಿಂದ ಅಧಿಕಾರವಧಿ ಪ್ರಾರಂಭವಾಗಲಿದೆ. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌ ಜೈಶಂಕರ್ ಟ್ವೀಟ್‌ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಅಂಕಿ ಅಂಶ, ಜನಸಂಖ್ಯಾಶಾಸ್ತ್ರ ಕ್ಷೇತ್ರದಲ್ಲಿನ ಭಾರತದ ಪರಿಣಿತಿ ಯುಎನ್‌ನ ಸಂಖ್ಯಾ ಆಯೋಗದ ಸ್ಥಾನ ಗಳಿಸೋಕೆ ನೆರವಾಗಿದೆ ಅಂತ ಜೈಶಂಕರ್‌ ಹೇಳಿದ್ದಾರೆ. ಅಂದ್ಹಾಗೆ 1947ರಲ್ಲಿ ಸ್ಥಾಪಿಸಲಾದ ಈ ಸ್ಟಾಟಿಸ್ಟಿಕಲ್‌ ಕಮಿಶನ್, ಜಾಗತಿಕ ಅಂಕಿ ಅಂಶ ವ್ಯವಸ್ಥೆಯ ಉನ್ನತ ಸಂಸ್ಥೆಯಾಗಿದೆ. ಸದಸ್ಯ ರಾಷ್ಟ್ರಗಳ ಮುಖ್ಯ ಸಂಖ್ಯಾಶಾಸ್ತ್ರಜ್ಞರನ್ನ ಈ ಆಯೋಗ ಒಳಗೊಂಡಿರುತ್ತೆ. ಅಂತಾರಾಷ್ಟ್ರೀಯ ಅಂಕಿ ಅಂಶಗಳಿಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ, ಮಾನದಂಡಗಳನ್ನ ನಿಗದಿ ಮಾಡುವ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವುಗಳನ್ನ ಅನುಷ್ಠಾನಗೊಳಿಸುವ ಜವಾಬ್ದಾರಿ ಹೊಂದಿದೆ. ಆಯೋಗ ಒಟ್ಟು 24 ಸದಸ್ಯ ರಾಷ್ಟ್ರಗಳನ್ನ ಒಳಗೊಂಡಿರುತ್ತೆ. ಇನ್ನು ಭಾರತ ಸಿಕ್ರೇಟ್‌ ಬ್ಯಾಲೆಟ್‌ ವೋಟಿಂಗ್‌ ಮೂಲಕ ಆಯ್ಕೆಯಾದ್ರೆ, ಅರ್ಜಂಟೀನಾ, ಸ್ಲೋವೆನಿಯಾ, ಯುಕ್ರೇನ್‌, ಅಮೆರಿಕ, ತಾಂಜನಿಯಾ ದೇಶಗಳು ಮೌಖಿಕ ಅನುಮೋದನೆಯಿಂದ ಆಯ್ಕೆಯಾಗಿವೆ. ಇನ್ನು ಏಷ್ಯಾ ಪೆಸಿಫಿಕ್‌ನಿಂದ ಆಯ್ಕೆ ಆಗುವ ಎರಡನೇ ದೇಶಕ್ಕೆ ಚೀನಾ ಹಾಗೂ ದಕ್ಷಿಣ ಕೊರಿಯಾ ನಡುವೆ ಪೈಪೋಟಿ ಉಂಟಾಗಿದೆ.

-masthmagaa.com

Contact Us for Advertisement

Leave a Reply