ಭಾರತದಲ್ಲಿರುವ ಅಫ್ಘಾನಿಸ್ತಾನ ರಾಯಭಾರ ಕಚೇರಿ ಬಂದ್‌!

masthmagaa.com:

ಭಾರತದಲ್ಲಿರುವ ಅಫ್ಘಾನಿಸ್ತಾನ ರಾಯಭಾರಿ ಕಚೇರಿಯನ್ನ ಕ್ಲೋಸ್‌ ಮಾಡಲಾಗುತ್ತೆ ಅಂತ ಭಾರತದಲ್ಲಿರುವ ಅಫ್ಘಾನಿಸ್ತಾನ ರಾಯಭಾರಿ ಫರೀದ್‌ ಮಮುಂಡ್‌ಜಾಯ್‌ ಹೇಳಿದ್ದಾರೆ. ತಾಲಿಬಾನ್‌ ಆಡಳಿತಕ್ಕೆ ಪತ್ರ ಬರೆದಿರುವ ಫರೀದ್‌, ಹಲವು ರಾಜತಾಂತ್ರಿಕ ವಿಚಾರಗಳಲ್ಲಿ ಭಾರತ ಸರ್ಕಾರ ನಮ್ಮನ್ನ ಕನ್ಸಿಡರ್‌ ಮಾಡಿಲ್ಲ. ಜೊತೆಗೆ ಟ್ರೇಡ್‌ ಮತ್ತು ಇತರ ವೀಸಾ ಪರಿಗಣನೆಗಾಗಿ ಭಾರತ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದು, ಭಾರತದಿಂದ ನಮಗೆ ಸಹಾಯ ಸಿಕ್ಕಿಲ್ಲ. ಇದಕ್ಕೆಲ್ಲ ತಾಲಿಬಾನ್‌ ನೇತೃತ್ವದ ಸರ್ಕಾರವೇ ಕಾರಣ ಅಂತ ಪತ್ರದಲ್ಲಿ ಆರೋಪಿಸಿದ್ದಾರೆ. ಇನ್ನು ಅಫ್ಘಾನಿಸ್ತಾನ ರಾಯಭಾರ ಸಿಬ್ಬಂದಿಗಳ ವೀಸಾವನ್ನ 2023ರ ಮೇ ನಂತ್ರ ಭಾರತ ವಿಸ್ತರಣೆ ಮಾಡಿಲ್ಲ. ಈ ಕಾರಣಕ್ಕೆ ಸೆಪ್ಟೆಂಬರ್‌ ನಂತರ ನಮ್ಮ ಕಾರ್ಯಾಚರಣೆಯನ್ನ ಸ್ಥಗಿತಗೊಳಿಸಲಿದ್ದೇವೆ ಅಂತ ಫರೀದ್‌ ತಿಳಿಸಿದ್ದಾರೆ. ಇತ್ತ ಈ ಬಗ್ಗೆ ಭಾರತೀಯ ಅಧಿಕಾರಿಯೊಬ್ರು ಮಾತಾಡಿದ್ದು, ರಾಯಭಾರ ಕಚೇರಿಯನ್ನು ಮುಚ್ಚುವ ನಿರ್ಧಾರ ಅಫ್ಘಾನಿಸ್ತಾನದ ಅಧಿಕಾರಿಗಳು ಮಾಡಿದ್ದಾರೆ. ನಾವು ಇಲ್ಲಿ ಅವರ ಮಿಷನ್‌ಗೆ ಬೇಕಾದ ಸಹಾಯವನ್ನ ಸಾಧ್ಯವಾದಷ್ಟು ಮಾಡಿದ್ದೇವೆ. ಹೀಗಾಗಿ ಇದು ಅವರ ಸ್ವಂತ ನಿರ್ಧಾರವಾಗಿದ್ದು, ಅವರು ಇಲ್ಲಿ ಕೆಲಸ ಮುಂದುವರೆಸಬೇಕು ಎಂದು ನಾವು ಬಯಸುತ್ತೇವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply