ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರ! ಪಾಕ್‌ಗೆ ಭಾರತದ ಮಾತಿನೇಟು!

masthmagaa.com:

ಜಮ್ಮು & ಕಾಶ್ಮೀರ ವಿಚಾರವಾಗಿ ವಿಶ್ವಸಂಸ್ಥೆಯಲ್ಲಿ ಸ್ವರ ಎತ್ತಿದ ಪಾಕ್‌ಗೆ ಇದೀಗ ಭಾರತ ಮಹಾಮಂಗಳಾರತಿ ಮಾಡಿದೆ. ಹೀನಾಯವಾದ ಮಾನವೀಯ ಹಕ್ಕುಗಳ ಇತಿಹಾಸ ಹೊಂದಿರೋ ದೇಶ ಬೇರೆ ರಾಷ್ಟ್ರಗಳ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸ್ಬಾರ್ದು ಅಂತ ಎಚ್ಚರಿಕೆ ನೀಡಿದೆ. ಅಂದ್ಹಾಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 55ನೇ ರೆಗ್ಯುಲರ್‌ ಸೆಶನ್‌ನಲ್ಲಿ ಭಾರತೀಯ ಕಾರ್ಯದರ್ಶಿ ಅನುಪಮ್‌ ಸಿಂಗ್‌ ಈ ಹೇಳಿಕೆ ನೀಡಿದ್ದಾರೆ. ಇನ್ನು ʻಭಾರತದ ಆಂತರಿಕ ವ್ಯವಹಾರಗಳ ಬಗ್ಗೆ ಕಮೆಂಟ್‌ ಮಾಡೋಕೆ ಪಾಕ್‌ಗೆ ಯಾವ್ದೇ ರೀತಿ ಹಕ್ಕಿಲ್ಲ. ಜಮ್ಮು & ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಅಂಗ. ಭಯೋತ್ಪಾದನೆಯಲ್ಲೇ ಸದಾ ಮುಳುಗಿಕೊಂಡಿರೋ ದೇಶ ಆಡೋ ಮಾತುಗಳನ್ನ ಕೇಳೋಕೂ ನಾವು ಸಿದ್ದವಿಲ್ಲʼ ಅಂತ ಕಡ್ಡಿ ಮುರಿದಂತೆ ಮಾತನಾಡಿದ್ದಾರೆ.

-masthmagaa.com

Contact Us for Advertisement

Leave a Reply