ಮಿತ್ರ ವಿಯೆಟ್ನಾಂಗೆ ಯುದ್ಧನೌಕೆ ಗಿಫ್ಟ್‌! ಚೀನಾಗೆ ಭಾರತ ಚಾಲೆಂಜ್!

masthmagaa.com:

ಭಾರತ ತನ್ನ ಮಿತ್ರರಾಷ್ಟ್ರ ವಿಯೆಟ್ನಾಂಗೆ ʻINS ಕೃಪಣ್‌ʼ ಸಣ್ಣ ಯುದ್ಧನೌಕೆಯನ್ನ ಗಿಫ್ಟ್‌ ಆಗಿ ಕೊಟ್ಟಿದೆ. ನೌಕಾಪಡೆಯ ಚೀಫ್‌ ಅಡ್ಮಿರಲ್‌ ಆರ್‌. ಹರಿಕುಮಾರ್‌ ಅವ್ರು ವಿಯೆಟ್ನಾಂ INS ಕೃಪಣ್‌ನ್ನ ನೇವಿಗೆ ಹಸ್ತಾಂತರ ಮಾಡಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಭಾರತ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸೋ ಯುದ್ಧನೌಕೆಯೊಂದನ್ನ ವಿದೇಶಕ್ಕೆ ಕೊಟ್ಟಂತೆ ಆಗಿದೆ. INS ಕೃಪಣ್‌ ಭಾರತದ ನೌಕಾಪಡೆಯಲ್ಲಿ 32 ವರ್ಷ ಸೇವೆ ಸಲ್ಲಿಸಿತ್ತು. ಅಂದ್ಹಾಗೆ ಹಿಂದೂ ಮಹಾಸಾಗರ ವಲಯದಲ್ಲಿ ತನ್ನ ಅಸ್ತಿತ್ವ ವಿಸ್ತರಿಸುತ್ತಿರುವ ಚೀನಾದ ಕಾರ್ಯತಂತ್ರಕ್ಕೆ ಟಕ್ಕರ್‌ ಕೊಡೋಕೆ ಭಾರತ ವಿಯಟ್ನಂ ಜೊತೆಗೆ ಸಂಬಂಧ ವೃದ್ಧಿಸಿಕೊಳ್ತಿದೆ. ಕಳೆದ ವರ್ಷ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವ್ರು ವಿಯಟ್ನಂಗೆ 12 ಹೈ ಸ್ಪೀಡ್‌ ಗಸ್ತು ಕರಾವಳಿ ಕಾವಲು ಪಡೆ ಬೋಟ್‌ಗಳನ್ನ ನೀಡಿದ್ರು. ಇದ್ರ ಜೊತೆಗೆ ಭಾರತ ವಿಯಟ್ನಂನ ರಕ್ಷಣಾ ತಂತ್ರಜ್ಞಾನ ಅಪ್‌ಗ್ರೇಡ್‌ ಮಾಡಿಕೊಳ್ಳೋದಕ್ಕೆ ಆರ್ಮಿ ಸಾಫ್ಟ್‌ವೇರ್‌ ಪಾರ್ಕ್‌ನ್ನ ನಿರ್ಮಿಸೋಕೆ 41 ಕೋಟಿ ಅನುದಾನ ನೀಡಿತ್ತು. ಅಂದ್ಹಾಗೆ ಈ ಯುದ್ಧನೌಕೆಗೆ ಸ್ವದೇಶಿ ಕ್ಷಿಪಣಿ ಅಳವಡಿಸಿದ ನಂತರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.

-masthmagaa.com

Contact Us for Advertisement

Leave a Reply