ಅಮೆರಿಕದಲ್ಲಿ ವಿದೇಶಿಗರ ಪೌರತ್ವ: ದ್ವಿತೀಯ ಸ್ಥಾನದಲ್ಲಿ ಭಾರತೀಯರು!

masthmagaa.com:

ಅಮೆರಿಕದಲ್ಲಿ ವಿದೇಶಿಗರು ಪೌರತ್ವ ಪಡೆಯೊ ವಿಚಾರವಾಗಿ ಭಾರತಿಯರೇ ಎರಡನೇ ಸ್ಥಾನ ಪಡ್ಕೊಂಡಿದ್ದಾರೆ ಅಂತ ಸರ್ವೆಯೊಂದು ಹೇಳಿದೆ. ಯುಎಸ್‌ ಸೆನ್ಸಸ್‌ ಬ್ಯೂರೋ ನಡೆಸಿದ ಅಮೆರಿಕನ್‌ ಕಮ್ಯೂನಿಟಿ ಸರ್ವೇ ಡಾಟಾ ಪ್ರಕಾರ., 2022ರಲ್ಲಿ 1ಲಕ್ಷ 28 ಸಾವಿರ ಮೆಕ್ಸಿಕನ್ನರು ಅಮೆರಿಕದ ಪೌರತ್ವ ಪಡ್ಕೊಂಡಿದ್ದು ವಿದೇಶಿಗರ ಲಿಸ್ಟ್‌ನಲ್ಲಿ ಫಸ್ಟ್‌ ಪ್ಲೇಸ್‌ನಲ್ಲಿದ್ದಾರೆ. ಅದನ್ನ ಬಿಟ್ರೆ 65,960 ಭಾರತೀಯರು ಅಮೆರಿಕದ ಪ್ರಜೆಗಳಾಗಿ ದ್ವಿತೀಯ ಸ್ಥಾನದಲ್ಲಿದ್ರೆ, ಫಿಲಿಫ್ಯನ್ಸ್‌, ಕ್ಯೂಬಾ ಕ್ರಮವಾಗಿ 3 ಹಾಗೂ 4ನೇ ಸ್ಥಾನದಲ್ಲಿವೆ. ಇನ್ನು ಮೆಕ್ಸಿಕೋದಿಂದ ಬಂದ 1ಕೋಟಿಗೂ ಅಧಿಕ ಜನ ಅಮೆರಿಕದಲ್ಲಿ ನೆಲೆಸಿ ಅತಿ ಹೆಚ್ಚು ವಿದೇಶಿಗರು ಅಂತ ಕರೆಸಿಕೊಂಡಿದ್ದಾರೆ. ಇನ್ನು 28 ಲಕ್ಷ ಭಾರತೀಯರು ಅಮೆರಿಕದಲ್ಲಿ ವಾಸ ಮಾಡ್ತಿದ್ದು, ದ್ವಿತೀಯ ಸ್ಥಾನದಲ್ಲಿದ್ದಾರೆ ಅಂತ ರಿಪೋರ್ಟ್‌ ಹೇಳಿದೆ.

-masthmagaa.com

Contact Us for Advertisement

Leave a Reply