ಭಾರತದ ಸಾಧನೆ ಕೊಂಡಾಡಿದ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ!

masthmagaa.com:

ಭಾರತದ UPI ವಿಶ್ವವ್ಯಾಪಿ ಸುದ್ದಿಯಾಗ್ತಿರೋ ನಡುವೆಯೇ ಈಗ ಖುದ್ದು ವಿಶ್ವಸಂಸ್ಥೆಯೇ ಭಾರತದ ಡಿಜಿಟಲ್‌ ಕ್ರಾಂತಿಯನ್ನ ಹಾಡಿಹೊಗಳಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆ UNGAದ ಅಧ್ಯಕ್ಷ ಡೆನ್ನಿಸ್‌ ಫ್ರಾನ್ಸಿಸ್‌ ಭಾರತದ ಈ ಸಾಧನೆಯನ್ನ ಕೊಂಡಾಡಿದ್ದಾರೆ. ಡಿಜಿಟಲೈಸೇಷನ್‌ ಮೂಲಕ ಭಾರತ ಬಡತನವನ್ನ ಕಡಿಮೆ ಮಾಡೋದಲ್ಲದೇ, ತನ್ನ ಜನರನ್ನ ಆರ್ಥಿಕತೆಯ ಮುಖ್ಯ ಭೂಮಿಕೆಗೆ ಕರೆತಂದಿದೆ. ಈ ಪಾಠವನ್ನ ವಿಶ್ವ ಕಲಿಯಬೇಕಿದೆ ಅಂತ ಹೇಳಿದ್ದಾರೆ. ಜನವರಿ 22ರಿಂದ 26ವರೆಗೆ ಡೆನ್ನಿಸ್‌ ಭಾರತ ಪ್ರವಾಸ ಮಾಡ್ತಿದ್ದಾರೆ. ಇತ್ತೀಚೆಗೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಜೊತೆಗೂ ದ್ವಿಪಕ್ಷೀಯ ಮಾತುಕತೆ ನಡೆಸಿದ್ರು. ಹೀಗಾಗಿ ತಮ್ಮ ಅನುಭವಗಳನ್ನ ಸಂದರ್ಶನ ಒಂದ್ರಲ್ಲಿ ಹಂಚಿಕೊಂಡಿದ್ದಾರೆ. ʻಭಾರತಕ್ಕೆ ಭೇಟಿ ಮಾಡಿದ್ದಾಗಿನಿಂದ…ನಾನು ಯಾವಾಗೆಲ್ಲಾ ಭಾರತದ ಬಗ್ಗೆ ಯೋಚನೆ ಮಾಡ್ತೀನೋ ಆವಾಗೆಲ್ಲಾ ನಾನು ʻಇನ್ಕ್ರೆಡಿಬಲ್‌ ಇಂಡಿಯಾʼ ಬಗ್ಗೆ ಯೋಚನೆ ಮಾಡ್ತೀನಿʼ ಅಂತೇಳಿ….ಭಾರತದ ಟೂರಿಸಂನ ಫೇಮಸ್‌ ಟ್ಯಾಗ್‌ಲೈನ್‌ ಉಲ್ಲೇಖಿಸಿದ್ದಾರೆ. ಮಾತು ಮುಂದುವರೆಸಿದ ಅವ್ರು, ʻಇನ್ಕ್ರೆಡಿಬಲ್‌ ಯಾಕೆ ಅನ್ನೋದಕ್ಕೆ ಪ್ರಮುಖ ಕಾರಣ ಅಂದ್ರೆ ಭಾರತ ಡಿಜಿಟಲೈಸ್‌ ಆಗ್ತಿರೋದು. ಕೇವಲ ಹ್ಯಾಂಡ್‌ಸೆಟ್‌ ಮತ್ತು ಡಿಜಿಟಲೈಸೇಶನ್‌ ಮಾಡೆಲ್‌ ಬಳಸಿ ಭಾರತ ಬಡತನವನ್ನ ನಿವಾರಿಸಿದೆʼ. ಭಾರತದ ರೈತರು, ಹೆಣ್ಣುಮಕ್ಕಳು ಮನೆಯಲ್ಲೇ ಕೂತು, ಬ್ಯಾಂಕಿಂಗ್‌ ನಡೆಸ್ತಾರೆ, ಬೆಲೆಗಳನ್ನ ನೆಗೋಷಿಯೇಟ್‌ ಮಾಡ್ತಾರೆ. ಹೀಗಾಗಿ ಈ ವಿಚಾರದಲ್ಲಿ ಖಂಡಿತ ಭಾರತಕ್ಕೆ ಅಡ್ವಾಂಟೇಜ್‌ ಇದೆ. ಈ ಪಾಠವನ್ನ ಬೇರೆ ಕಡೆ ಕೂಡ ಹಂಚಿಕೊಳ್ಳಬಹುದು ಅಂದಿದ್ದಾರೆ. ಅಲ್ಲದೇ ಭಾರತ ಇನ್‌ಫ್ರಾದಲ್ಲಿ ಹೂಡಿಕೆ ಮಾಡ್ತಿರೋದನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಇನ್‌ಫ್ರಾದಲ್ಲಿ ಹೂಡಿಕೆ ಮಾಡೋದ್ರಿಂದ ಆರ್ಥಿಕತೆ ಬೂಸ್ಟ್‌ ಆಗುತ್ತೆ. ಉದ್ಯೋಗ ಸೃಷ್ಟಿ, ಜನರಿಗೆ ಉತ್ಪನ್ನಗಳು ಸಿಗುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply