ಜಗತ್ತಿನಲ್ಲಿ ಟಿಬಿ ಕೇಸ್‌ಗಳು ಹೆಚ್ಚಿರೋದು ಭಾರತದಲ್ಲೇ! WHO ಹೇಳಿದ್ದೇನು?

masthmagaa.com:

ಭಾರತದಲ್ಲಿ ಕ್ಷಯರೋಗಕ್ಕೆ (ಟಿಬಿ) ತುತ್ತಾಗೋರ ಸಂಖ್ಯೆ ಅತೀ ಹೆಚ್ಚಿದೆ ಅಂತ WHO ಹೇಳಿದೆ. ಜಗತ್ತಿನ ಒಟ್ಟು ಟಿಬಿ ಕೇಸ್‌ಗಳಲ್ಲಿ 27% ನಷ್ಟು ಟಿಬಿ ಕೇಸ್‌ ಕೇವಲ ಭಾರತದಲ್ಲಿ ವರದಿಯಾಗಿವೆ ಅಂತ ವಿಶ್ವ ಆರೋಗ್ಯ ಸಂಸ್ಥೆಯ ಗ್ಲೋಬಲ್‌ ಟಿಬಿ ರಿಪೋರ್ಟ್‌ 2023ರಲ್ಲಿ ಉಲ್ಲೇಖಿಸಲಾಗಿದೆ. ದೇಶದಲ್ಲಿ ಒಟ್ಟು 28.2 ಲಕ್ಷ ಟಿಬಿ ಕೇಸ್‌ಗಳು ದಾಖಲಾಗಿದ್ದು, 3,42,000 ಜನರು ಈ ಖಾಯಿಲೆಯಿಂದ ಮೃತಪಟ್ಟಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಟಿಬಿ ಕೇಸ್‌ಗಳನ್ನ ಕಡಿಮೆ ಮಾಡೋ ನಿಟ್ಟಿನಲ್ಲಿ ಭಾರತ ಪ್ರಾಗ್ರೆಸ್‌ ಕಾಣ್ತಾ ಇದೆ ಎನ್ನಲಾಗಿದೆ. ಇನ್ನು ಜಗತ್ತಿನ ಒಟ್ಟು ಟಿಬಿ ಕೇಸ್‌ಗಳಲ್ಲಿ 87% ನಷ್ಟು ಟಿಬಿ ಕೇಸ್‌ಗಳು 30 ರಾಷ್ಟ್ರಗಳಿಂದ ವರದಿಯಾಗ್ತಾ ಇದೆ ಅಂತ ರಿಪೋರ್ಟ್‌ನಲ್ಲಿ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply