ಪಾಕಿಸ್ತಾನದ ನಿರ್ಣಯಕ್ಕೆ ಜೈ ಅಂದ ವಿಶ್ವಸಂಸ್ಥೆ: ಭಾರತ ಛೀಮಾರಿ

masthmagaa.com:

ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನ ಮತ್ತೊಮ್ಮೆ ಭಾರತವನ್ನ ಕೆಣಕಿದೆ. ವಿಶ್ವಸಂಸ್ಥೆಯ ಜನರಲ್‌ ಅಸೆಂಬ್ಲಿಯಲ್ಲಿ ಸಿಎಎ, ಅಯೋಧ್ಯೆಯದಲ್ಲಿ ರಾಮಮಂದಿರ ವಿಚಾರವನ್ನ ಪ್ರಸ್ತಾಪ ಮಾಡಿದೆ. ಇವುಗಳನ್ನೂ ಒಳಗೊಂಡಂತೆ ಜಗತ್ತಲ್ಲಿ ʻಮುಸ್ಲಿಂ ವಿರೋಧಿ ನೀತಿಯ ವಿರುದ್ಧದ ಕ್ರಮಗಳುʼ ಅನ್ನೋ ನಿರ್ಣಯವನ್ನ ಪಾಕ್‌ ರಾಯಭಾರಿ ಮುನಿರ್‌ ಅಕ್ರಮ್‌ ಮಂಡಿಸಿದ್ದಾರೆ. ಆಶ್ಚರ್ಯ ಏನಂದ್ರೆ ಜನರಲ್‌ ಅಸೆಂಬ್ಲಿ ಇದನ್ನ ಅಡಾಪ್ಟ್‌ ಮಾಡ್ಕೊಂಡಿದೆ. ಬರೋಬ್ಬರಿ 115 ದೇಶಗಳು ಈ ನಿರ್ಣಯಕ್ಕೆ ವೋಟ್‌ ಹಾಕಿವೆ. ಇದರಲ್ಲಿ ಒಂದೇ ಒಂದು ದೇಶ ಕೂಡ ಇದರ ವಿರುದ್ಧ ವೋಟ್‌ ಹಾಕಿಲ್ಲ. ಭಾರತ, ಯುಕೆ, ಜರ್ಮನಿ, ಫ್ರಾನ್ಸ್‌, ಇಟಲಿ, ಯುಕ್ರೇನ್‌ ಸೇರಿ 44 ದೇಶಗಳು ಈ ನಿರ್ಣಯ ಮಂಡಿಸೋ ವೇಳೆ ಗೈರುಹಾಜರಾಗಿದ್ವು.

ಇನ್ನು ಪಾಕ್‌ ಪ್ರಸ್ತಾಪಿಸಿದ ಇಸ್ಲಾಮಾಫೋಬಿಯಾದಲ್ಲಿ ಸಿಎಎ ಮತ್ತು ಅಯೋದ್ಯೆ ವಿಚಾರವನ್ನ ಹೇಳಲಾಗಿತ್ತು. ಇದರ ವಿರುದ್ದ ಭಾರತದ ರಾಯಭಾರಿ ಪಾಕಿಸ್ತಾನಕ್ಕೆ ಹಾಗೂ ಜನರಲ್‌ ಅಸೆಂಬ್ಲಿಗೆ ಕ್ಲಾಸ್‌ ತಗೊಂಡಿದ್ದಾರೆ. ʻನನ್ನ ದೇಶದ ವಿಚಾರಗಳ ಬಗ್ಗೆ ಪಾಕಿಸ್ತಾನದ ಪ್ರತಿನಿಧಿಗೆ ಇರೋ ಅಲ್ಪ ಜ್ಞಾನವನ್ನ ಕಣ್ತುಂಬಿಕೊಳ್ಳೋ ಪರಿಸ್ಥಿತಿ ಬಂದಿದ್ದು ನನ್ನ ದುರಾದೃಷ್ಟಕರ. ಅಜ್ಞಾನ, ವಿಷಯದ ಆಳ, ಜಾಗತಿಕ ಸಮ್ಮತಿ ಇಲ್ದೇ ಇರೋ ಒಂದು ರೆಸೊಲ್ಯೂಷನ್‌ನ್ನ ಜನರಲ್‌ ಅಸೆಂಬ್ಲಿ ಕನ್ಸಿಡರ್‌ ಮಾಡಿದೆ. ಇದು ಈ ನಿಯೋಗದ, ಈ ಅಸೆಂಬ್ಲಿಯ ಬಲ ಅಲ್ಲ ಅಂತ ಭಾರತದ ರಾಯಭಾರಿ ಪಾಕಿಸ್ತಾನಕ್ಕೆ ಮತ್ತು ಅದನ್ನ ಪಾಸ್‌ ಮಾಡಿದ ವಿಶ್ವಸಂಸ್ಥೆಗೆ ಎಲ್ಲಕ್ಕೂ ಛೀಮಾರಿ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply