ಕಾಕಂಬಿ ರಫ್ತಿನ ಮೇಲೆ 50% ತೆರಿಗೆ ವಿಧಿಸಿದ ಕೇಂದ್ರ ಸರ್ಕಾರ!

masthmagaa.com:

ಮದ್ಯ ಉತ್ಪಾದನೆಗೆ ಕಚ್ಚಾ ವಸ್ತುವಾಗಿ ಬಳಸುವ ಕಬ್ಬಿನ ಉಪ ಉತ್ಪನ್ನವಾದ ಮೊಲಾಸಸ್ (ಕಾಕಂಬಿ) ರಫ್ತಿನ ಮೇಲೆ ಸರ್ಕಾರ 50%ನಷ್ಟು ರಫ್ತು ಸುಂಕ ವಿಧಿಸಿದೆ. ವಿತ್ತ ಸಚಿವಾಲಯದ ಅಧಿಸೂಚನೆಯಲ್ಲಿ ಸಕ್ಕರೆ ಹೊರತೆಗೆಯುವಿಕೆ ಅಥವಾ ಸಂಸ್ಕರಣೆಯಿಂದ ಪಡೆದ ಮೊಲಾಸಿಸ್ ಮೇಲೆ ಶೇಕಡಾ 50 ರಫ್ತು ಸುಂಕ ವಿಧಿಸಲಾಗುವುದು ಅಂತ ತಿಳಿಸಿದೆ. ಮತ್ತೊಂದು ಅಧಿಸೂಚನೆಯಲ್ಲಿ, ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳಾದ ತಾಳೆ ಎಣ್ಣೆ, ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆ ಆಮದಿನ ಮೇಲೆ ಪ್ರಸ್ತುತ ಜಾರಿಯಲ್ಲಿರುವ ರಿಯಾಯಿತಿ ತೆರಿಗೆ ದರಗಳನ್ನ 2025ರ ಮಾರ್ಚ್ 31ರವರೆಗೆ ಅಂದರೆ, ಒಂದು ವರ್ಷ ಅವಧಿಗೆ ವಿಸ್ತರಿಸಿದೆ.

-masthmagaa.com

Contact Us for Advertisement

Leave a Reply