ಭಾರತ ಹಿಂದೂ ರಾಷ್ಟ್ರೀಯವಾದದ ದೇಶವಾಗೋ ಅಪಾಯದಲ್ಲಿದೆ: ಅಮೆರಿಕ ಸಂಸದ

masthmagaa.com:

ಭಾರತ ಹಿಂದೂ ರಾಷ್ಟ್ರೀಯವಾದದ ದೇಶವಾಗೋ ಅಪಾಯದಲ್ಲಿದೆ ಅಂತ ಅಮೆರಿಕದ ಡೆಮಾಕ್ರೆಟಿಕ್‌ ಸದಸ್ಯ ಆಂಡಿ ಲೆವಿನ್‌ ಹೇಳಿದ್ದಾರೆ. ತಮ್ಮ ಅಧಿಕಾರವಧಿಯ ವಿದಾಯದ ಭಾಷಣ ಮಾಡುವಾಗ ಈ ಕುರಿತು ಮಾತನಾಡಿದ ಅವರು, ʻಭಾರತದಂತಹ ದೇಶಗಳಲ್ಲಿ ಮಾನವ ಹಕ್ಕುಗಳ ರಕ್ಷಣೆ ಕುರಿತಂತೆ ನಾನು ಎಂದಿಗೂ ದ್ವನಿ ಎತ್ತುತ್ತೇನೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿರೋ ಭಾರತ, ಜಾತ್ಯಾತೀತವಾಗುವ ಬದಲಿಗೆ ಹಿಂದೂ ರಾಷ್ಟ್ರೀಯವಾದದ ದೇಶವಾಗೋ ಅಪಾಯದಲ್ಲಿದೆ.. ನಾನು ಹಿಂದೂ, ಜೈನ, ಬೌಧ್ದ, ಅಥವಾ ಭಾರತದಲ್ಲಿ ಹುಟ್ಟಿದ ಯಾವುದೇ ಧರ್ಮವನ್ನ ಗೌರವಿಸ್ತೇನೆ. ಆದ್ರೆ ನಮಗೆ ಅಲ್ಲಿರೋ ಜನರ ಹಕ್ಕುಗಳು ಮುಖ್ಯ ಅಂತ ಹೇಳಿದ್ದಾರೆ. ಈ ಮೂಲಕ ಭಾರತದ ವಿರುದ್ದ ಮಾತನಾಡುವ ತಮ್ಮ ಹಳೇ ಚಾಳಿಯನ್ನ ಮುಂದುವರೆಸಿದ್ದಾರೆ. ಈ ಲೆವಿನ್‌ ಈ ಹಿಂದೆ ಕೂಡ ಅನೇಕ ಸಲ ಭಾರತದ ವಿರುದ್ದ ಹೇಳಿಕೆಗಳನ್ನ ಕೊಟ್ಟಿದ್ರು. ಕಾಶ್ಮೀರದಲ್ಲಿ ಭಾರತ ಕ್ರೂರವಾಗಿ ನಡೆದುಕೊಳ್ತಿದೆ ಅಂತ ಪಾಕಿಸ್ತಾನದ ಚೇಲಾ ರೀತಿ ಮಾತನಾಡಿದ್ರು. ತನ್ನನ್ನ ತಾನು ಮಹಾನ್‌ ಮಾನವತಾವಾದಿ, ಅಜೀವ ಮಾನವ ಹಕ್ಕುಗಳ ಹೋರಾಟಗಾರ ಅಂತ ಹೇಳಿಕೊಳ್ಳುವ ಈತ, ತಮ್ಮ ದೇಶದಲ್ಲಿ ಇನ್ನೂ ಜೀವಂತವಾಗಿರೋ ವರ್ಣಬೇಧ ನೀತಿ ಅಥವಾ ದಿನಬೆಳಗಾದ್ರೆ ಹಾದಿ ಬೀದಿಯಲ್ಲಿ ಶೂಟ್‌ ಮಾಡ್ಕೊಂಡು ಸಾವನ್ನಪ್ಪುವ ಜನರ ಹಕ್ಕುಗಳನ್ನ ಬಿಟ್ಟು ಭಾರತದ ಬಗ್ಗೆ ಈ ಪರಿ ಕಾಳಜಿ ತೋರಿಸ್ತಾ ಸುಳ್ಳಿನ ಆರೋಪ ಮಾಡ್ತಿರೋದು ನಿಜಕ್ಕೂ ದುರಂತ.

-masthmagaa.com

 

Contact Us for Advertisement

Leave a Reply