ಮೋದಿಗೂ ನೆತನ್ಯಾಹು ಒಂದೇ, ಭಾರತ ಡೆಮಾಕ್ರಸಿ ಅಲ್ಲ ಹಿಪಾಕ್ರಸಿ: ಪಾಕ್‌ ಹಂಗಾಮಿ ಪ್ರಧಾನಿ

masthmagaa.com:

ಕತ್ತೆಗೇನ್‌ ಗೊತ್ತು ಕಸ್ತೂರಿ ಪರಿಮಳ ಅನ್ನೋ ಹಾಗೆ ಪ್ರಜಾಪ್ರಭುತ್ವದ ಗಂಧಗಾಳಿಯೇ ಗೊತ್ತಿಲ್ಲದೇ ಇರೋ ಪಾಕಿಸ್ತಾನ ಈಗ ಭಾರತಕ್ಕೆ ಪ್ರಜಾಫ್ರಭುತ್ವದ ಪಾಠ ಮಾಡಿದೆ. ಭಾರತ ಅತಿ ದೊಡ್ಡ ಡೆಮಾಕ್ರಸಿ ಅಲ್ಲ. ಅದು ಅತಿ ದೊಡ್ಡ ಹಿಪಾಕ್ರಸಿ ಅಂದ್ರೆ ಬೂಟಾಟಿಕೆ ತುಂಬಿರೋ ದೇಶ ಅಂತ ಪಾಕಿಸ್ತಾನದ ಸೇನೆ ಕೈಯಲ್ಲಿರೋ ಅಲ್ಲಿನ ಸೋ ಕಾಲ್ಡ್ ಹಂಗಾಮಿ ಪ್ರಧಾನಿ ನಾಲಿಗೆ ಹರಿಬಿಟ್ಟಿದ್ದಾರೆ. ‌ʻʻಭಾರತದಲ್ಲಿ ಜಾತಿ ಆಧಾರಿತ ಸಾಮಾಜಿಕ ವ್ಯವಸ್ಥೆ ಇದೆ. ಅಲ್ಪಸಂಖ್ಯಾತರನ್ನ ಅಲ್ಲಿ ಕಡೆಗಣಿಸಲಾಗುತ್ತೆ. ಸರ್ಕಾರಿ ಪ್ರಾಯೋಜಿತ ಹತ್ಯೆಗಳು, ಭಯೋತ್ಪಾದನೆಗಳು ಭಾರತದಲ್ಲಿ ಜಾಸ್ತಿ ಆಗ್ತವೆ. ಇದನ್ನೆಲ್ಲಾ ಮರೆಮಚೋಕೆ ಭಾರತ ಜಾತ್ಯಾತೀಯತೆ, ಪ್ರಜಾಪ್ರಭುತ್ವ ಹಾಗೂ ವೈವಿಧ್ಯತೆ ಅಂತ ಮಾತಾಡುತ್ತೆ ಅಂತ ಅಲ್ಲಿನ ಹಂಗಾಮಿ ಪ್ರಧಾನಿ ಅನ್ವರುಲ್‌ ಹಕ್‌ ಕಕ್ಕರ್‌ ಹೇಳಿದ್ದಾರೆ. ಮುಜಾಫರ್‌ಬಾದ್‌ನಲ್ಲಿ ಆಯೋಜಿಸಿದ್ದ ಅಜಾದ್‌ ಜಮ್ಮು ಅಂಡ್‌ ಕಾಶ್ಮೀರ್‌(AJK) ಅಧಿವೇಶನದಲ್ಲಿ ಇಷ್ಟೆಲ್ಲಾ ಮಾತುಗಳನ್ನ ಕಕ್ಕರ್‌ ಹೇಳಿದ್ದಾರೆ. ಇಲ್ಲಿ ಅಜಾದ್‌ ಕಾಶ್ಮೀರ ಅಂದ್ರೆ ಇದ್ಯಾವುದು ಹೊಸ ದೇಶ ಅನ್ಕೊಬೇಡಿ. ಪಾಕಿಸ್ತಾನ ಆಕ್ರಮಿತ ಪ್ರದೇಶ. ಅಲ್ಲಿ ಒಂದು ಕಾರ್ಯಕ್ರಮ ಮಾಡ್ಕೊಂಡು ಭಾರತದ ವಿರುದ್ದ ಮಾತನಾಡಿದೆ ಈ ಹಂಗಾಮಿ ಪ್ರಧಾನಿ. ಅಷ್ಟೇ ಅಲ್ಲ ಭಾರತದ ಸುಪ್ರೀಂ ಕೋರ್ಟ್‌ ಆರ್ಟಿಕಲ್‌ 370ಗೆ ಕೊಟ್ಟಿರೋ ತೀರ್ಪು ರಾಜಕೀಯ ಪ್ರೇರಿತ. ಪಾಕಿಸ್ತಾನವನ್ನ ಕೇಳದೇ ಮಾಡದೆ ಭಾರತ ಏಕಪಕ್ಷೀಯ ನಿರ್ಧಾರಗಳನ್ನ ತಗೊಂಡಿದೆ. ಮೋದಿಗೂ ಇಸ್ರೇಲ್‌ ಪ್ರಧಾನಿ ನೆತನ್ಯಾಹುಗೂ ಜಾಸ್ತಿ ವ್ಯತ್ಯಾಸ ಇಲ್ಲ. ಅವರಿಬ್ರಿಗೂ ಬಹಳಷ್ಟು ಸಿಮಿಲಾರಿಟಿ ಇದೆ. ಆದ್ರೆ ಮುಜಾಫರಾಬಾದ್‌ ಗಾಜಾ ಅಲ್ಲ. ದೆಹಲಿ ಟೆಲ್‌ ಅವೀವ್‌ ಅಲ್ಲ. ಗಿಲ್ಗಿಟ್‌ ಬಾಲ್ಟಿಸ್ತಾನ, ಆಜಾದ್‌ ಕಾಶ್ಮೀರದ ಒಂದಿಂಚೂ ನೆಲವನ್ನ ನಾವು ಬಿಡಲ್ಲ. ಕಾಶ್ಮೀರ ಪಾಕಿಸ್ತಾನದ ಕುತ್ತಿಗೆಯ ನರದಲ್ಲಿದೆ. ಕಾಶ್ಮೀರ ಇಲ್ಲದೆ ಪಾಕಿಸ್ತಾನ ಅಪೂರ್ಣ.ʼ ಅಂತ ಪಕ್ಕಾ ಸಿನಿಮಾ ಸ್ಟೈಲ್‌ನಲ್ಲಿ ಡೈಲಾಗ್‌ ಹೊಡಿದಿದೆ ಈ ಪಾಕಿಸ್ತಾನ ಪ್ರಧಾನಿ. ಅಲ್ಲ ಈತನ ಮಾತುಕೇಳಿ ಅಲ್ಲಿನ ಜನಾ ಆದ್ರೂ ನಗಬಾರ್ದ ಅಂತ. ಬಹುಷಃ ಈತ ಪಾಕಿಸ್ತಾನದ ಬಗ್ಗೆ ಮಾತಾಡೋಕೆ ಹೋಗಿ ಭಾರತ ಅನ್ಬಿಟ್ಟಿದಾರೆ ಅನ್ಸುತ್ತೆ. ಯಾಕಂದ್ರೆ ಅವರ ಆಡಿರೋ ಒಂದೊದು ಮಾತುಗಳು ಅದೇ ಪಾಕಿಸ್ತಾನಕ್ಕೆ ಕನ್ನಡಿ ಹಿಡಿದಿರೋ ತರ ಇದೆ. ‌ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸಿ ದೇವಾಲಯಗಳನ್ನ ಉರುಳಿಸ್ತಿದ್ದಾರೆ, ಇನ್ನೊಂದು ಕಡೆ ಅಫ್ಘಾನ್‌ ನಿರಾಶ್ರಿತರನ್ನ ಕಸದಂತೆ ತಗೊಂಡು ಸುರೀತಾ ಇದ್ದಾರೆ. ಪ್ರಜಾಪ್ರಭುತ್ವ ಅಂತ ಹೇಳ್ಕೊಂಡೇ ಸೇನೆ ಕೈಗೆ ಅರ್ಧ ಶತಮಾನ ಅಧಿಕಾರ ಒಪ್ಪಿಸಿಯಾಯ್ತು. ಈಗ ಅಲ್ಲಿನ ಉಗ್ರರು ದಿನಾ ದೀಪಾವಳಿ ಮಾಡ್ಕೊಂಡು ಪಟಾಕಿ ಹೊಡೀತಿದ್ದಾರೆ. ದೇಶನೇ ಮೂರು ಮೂರು ಭಾಗ ಆಗೋ ಪರಿಸ್ಥಿಲ್ಲಿದೆ. ಜನರ ಹೊಟ್ಟೆಗೆ ಹಿಟ್ಟಿಲ್ಲ. ಸೇನಾ ವಾಹನಗಳಿಗೆ ಪೆಟ್ರೋಲ್‌ ಇಲ್ಲ. ಸಾಲ ಸಾಲ ಅಂತ ಅಲ್ಲಿನ ಸೇನಾಧಿಕಾರಿಗಳು ರಾಜಕಾರಣಿಗಳು ಫ್ಲೈಟ್‌ ಹತ್ಕೊಂಡು ಯುರೋಪ್‌ ದೇಶಗಳ ಬೆನ್ನು ಬಿದ್ದಿದ್ದಾರೆ. ಇಷ್ಟಾದ್ರೂ ಈ ಟೆಂಪರ್‌ವರಿ ಪ್ರಧಾನಿಗೆ ಮಾತ್ರ ಕಾಶ್ಮೀರ ಬೇಕಂತೆ. ಅದರಲ್ಲೂ ಭಾರತದ ಸುಪ್ರೀಂ ಕೋರ್ಟ್‌ ತೀರ್ಪು ಕೊಡೋಕೆ ಈ ಟೆಂಪ್ರವರಿಯನ್ನ ಕೇಳಬೇಕಿತ್ತಂತೆ. ಕಾಶ್ಮೀರ ಇವರ ಕುತ್ತಿಗೆ ನರ ಅಂತೆ..ಎಲ್ಲೆಲ್ಲಿಂದ ಬರ್ತಾರೋ ಇವರೆಲ್ಲಾ..!

-masthmagaa.com

Contact Us for Advertisement

Leave a Reply