ಪಾಕ್‌ಗೆ ನುಗ್ಗಿ ಉಗ್ರರ ಹತ್ಯೆ! ಸತ್ಯ ಒಪ್ಕೊಂಡ್ರಾ ಪ್ರಧಾನಿ ಮೋದಿ ?

masthmagaa.com:

ಜಗತ್ತಿನಾದ್ಯಂತ ಭಾರತದ ಮೇಲೆ ಸುಫಾರಿ ಕಿಲ್ಲಿಂಗ್‌ ಆರೋಪ, ಗೂಢಚರ್ಯೆ ಆರೋಪ ಕೇಳಿ ಬರ್ತಿರೋ ಹೊತ್ತಲ್ಲೇ ಪ್ರಧಾನಿ ಮೋದಿ ದೊಡ್ಡ ಸ್ಟೇಟ್‌ಮೆಂಟ್‌ ಕೊಟ್ಟಿದ್ದಾರೆ. ಅವರು ಕೊಟ್ಟಿರೋದು ನಾರ್ಮಲ್‌ ಸ್ಟೇಟ್‌ಮೆಂಟ್‌ ಥರ ಕಂಡ್ರೂ ಈಗ ಅವರು ಹೇಳಿರೋ ಸಂಧರ್ಭ ಮೋದಿಯವರ ಮಾತಿಗೆ ಹೊಸ ಅರ್ಥ ಕೊಡ್ತಿದೆ. ಏನ್‌ ಹೇಳಿದ್ದಾರೆ ಅಂದ್ರೆ ʻʻನಾವು ಉಗ್ರರನ್ನ ಅವ್ರ ನೆಲದಲ್ಲೇ ನಿರ್ಮೂಲನೆ ಮಾಡ್ತೀದ್ದೀವಿʼ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. ಉತ್ತರಾಖಂಡದ ರಿಷಿಕೇಶ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿ ವೇಳೆ ʻದೇಶದಲ್ಲಿ ದುರ್ಬಲ ಮತ್ತು ಅಸ್ಥಿರ ಸರ್ಕಾರಗಳು ಇದ್ದಾಗೆಲ್ಲಾ, ಶತ್ರುಗಳು ಅದ್ರ ಲಾಭ ಪಡೆದುಕೊಂಡಿದ್ರು. ಭಯೋತ್ಪಾದನೆ ಹೆಚ್ಚಾಯ್ತು. ಆದ್ರೆ ಸ್ಟ್ರಾಂಗ್‌ ಆಗಿರೋ ನಮ್ಮ ಸರ್ಕಾರದ ಅಡಿಯಲ್ಲಿ ಮಾತ್ರ ನಮ್ಮ ಭದ್ರತಾ ಪಡೆಗಳು ಉಗ್ರರನ್ನ ಅವ್ರ ನೆಲದಲ್ಲೇ ಹತ್ಯೆ ಮಾಡಿದ್ದಾರೆʼ ಅಂತ ಹೇಳಿದ್ದಾರೆ. ಇಲ್ಲಿ ಮೋದಿಯವರ ಈ ಮಾತು ಯಾಕೆ ಅಷ್ಟು ಇಂಪಾರ್ಟೆಂಟ್‌ ಪಡ್ಕೋತಿದೆ ಅಂದ್ರೆ ಇತ್ತೀಚೆಗಷ್ಟೇ ಭಾರತ ತಮ್ಮ ನೆಲದಲ್ಲಿ ಸುಫಾರಿ ಕಿಲ್ಲಿಂಗ್‌ ಮಾಡ್ತಿದೆ ಅಂತ ಪಾಕಿಸ್ತಾನ ಆರೋಪಿಸಿತ್ತು. ಅದಾದ ಮೇಲೆ ಇದೇ ಆರೋಪವನ್ನ ಬ್ರಿಟನ್‌ನ ಖ್ಯಾತ ಪತ್ರಿಕೆ ಗಾರ್ಡಿಯನ್‌ ರಿಪೋರ್ಟ್‌ ಮಾಡಿತ್ತು. ಕೆನಡ ಕೂಡ ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆ ವಿಚಾರವಾಗಿ ಇವತ್ತಿಗೂ ರಾಗ ಎಳೀತಾ ಇದ್ದಾರೆ. ಇದನ್ನ ಭಾರತವೇ ಮಾಡಿಸಿರೋದು ನಮ್ಮ ಕಾನೂನನ್ನ ಉಲ್ಲಂಘನೆ ಮಾಡಿದ್ದಾರೆ ಅಂತ ಭಾರತದ ವಿರುದ್ದ ಹೇಳಿಕೆ ಕೊಡ್ತಿದ್ದಾರೆ ಅದಿನ್ನೂ ನಿಂತಿಲ್ಲ. ಆ ಕಡೆ ಅಮೆರಿಕ ಕೂಡ ಖಲಿಸ್ತಾನಿ ಉಗ್ರ ಪನ್ನುನ್‌ ಹತ್ಯೆಗೆ ಭಾರತ ಸಂಚುರೂಪಿಸ್ತಿದೆ ಅಂತ ಕೆಲ ತಿಂಗಳುಗಳ ಹಿಂದೆ ಆರೋಪ ಮಾಡಿತ್ತು. ಅದರ ತನಿಖೆ ಕೂಡ ಅಮೆರಿಕದಲ್ಲಿ ನಡೀತಿದೆ. ಇಷ್ಟೆಲ್ಲಾ ಇರುವಾಗಲೇ ಪ್ರಧಾನಿ ಮೋದಿ ನಾವು ಶತ್ರುಗಳನ್ನ ಅವರ ನೆಲದಲ್ಲೇ ನಾಶ ಮಾಡ್ತಿದ್ದೀವಿ ಅಂತ ಹೇಳಿರೋದು ಜಾಗತಿಕ ರಾಜಕೀಯದಲ್ಲಿ ದೊಡ್ಡ ಕೋಲಾಹಲ ಸೃಷ್ಟಿಸ್ತಿದೆ. ಯಾಕಂದ್ರೆ ಭಾರತದ ಮೇಲೆ ಆರೋಪ ಕೇಳಿ ಬಂದಾಗೆಲ್ಲಾ ವಿದೇಶಾಂಗ ಇಲಾಖೆ ತಳ್ಳಿ ಹಾಕಿತ್ತು. ನಮಗೂ ಇದಕ್ಕೂ ಸಂಬಂಧ ಇಲ್ಲ…ನಾವು ಎಲ್ಲರ ಸಾರ್ವಭೌಮತ್ವವನ್ನ ಗೌರವಿಸ್ತೀವಿ, ನಾವು ಯಾರ ಹಕ್ಕನ್ನೂ ಉಲ್ಲಂಘನೆ ಮಾಡಲ್ಲ ಅಂತ ಕಡ್ಡಿತುಂಡು ಮಾಡಿದಂತೆ ಹೇಳ್ತಾ ಬರ್ತಿದೆ. ಸೋ ಹೀಗಿರುವಾಗಲೇ ಮೋದಿಯವರಿಂದ ಇಂಥ ಮಾತು ಬಂದಿದೆ. ಬಹುಶಃ ಇಲ್ಲಿ ಮೋದಿ ಸರ್ಕಾರ ತಮ್ಮ ಮಾತಿಗೆ ಇನ್ನೊಂದು ವ್ಯಾಖ್ಯಾನ ಕೊಡೋ ಸಾಧ್ಯತೆಯೂ ಇರುತ್ತೆ. ಈ ಪ್ರಶ್ನೆಗಳು ಉದ್ಭವಿಸಿದಾಗ, ಉದ್ಭವಿಸೇ ಉದ್ಭವಿಸುತ್ತೆ, ಆ ಪ್ರಶ್ನೆ ಬಂದಾಗ ಸರ್ಜಿಕಲ್‌ ಏರ್‌ಸ್ಟ್ರೈಕ್‌ ಮಾಡಿರೋ ಬಗ್ಗೆಯೂ ಅವರು ಹೇಳಿಕೆ ಕೊಡಬೋದು. ಕೆಲವೇ ದಿನಗಳ ಹಿಂದಷ್ಟೇ ರಾಜನಾಥ್‌ ಸಿಂಗ್‌ ಕೂಡ ಇಂಥದ್ದೇ ಹೇಳಿಕೆ ಕೊಟ್ಟಿದ್ರು. ಈ ಮುಂಚೆ ಉಗ್ರರನ್ನ ಹೊಡೆದು ಬಂದ ರೀತಿ ಅಗತ್ಯ ಬಿದ್ರೆ ಪಾಕಿಸ್ತಾನದ ಒಳಗೂ ನುಗ್ಗಿ ಹೊಡೆದು ಬರ್ತೀವಿ ಅಂತ ಹೇಳಿದ್ರು. ಇವತ್ತೂ ಕೂಡ ಉಗ್ರವಾದವನ್ನ ಹತ್ತಿಕ್ಕೊ ವಿಚಾರವಾಗಿ ರಾಜನಾಥ್‌ ಸಿಂಗ್‌ ಮತ್ತೆ ಪಾಕ್‌ ಬಗ್ಗೆ ಮಾತಾಡಿದ್ದಾರೆ. ಭಯೋತ್ಪಾದನೆ ಹತ್ತಿಕಲು ಪಾಕ್‌ಗೆ ಸಾಧ್ಯವಾಗದೇ ಹೋದ್ರೆ ಭಾರತ ಸಹಾಯ ಮಾಡೋಕೆ ರೆಡಿಯಾಗಿದೆ ಅಂತ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಅಲ್ದೇ ನೆರೆಯ ದೇಶ ಉಗ್ರವಾದವನ್ನ ಬಳಸಿಕೊಂಡು ಭಾರತವನ್ನ ಅಸ್ಥಿರಗೊಳಿಸಲು ಬಯಸಿದ್ರೆ ಅದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತೆ ಅಂತಲೂ ಹೇಳಿದ್ದಾರೆ.‌ ಇದರ ನಡುವೆಯೇ ಮೋದಿಯವರ ಮಾತು ಕೂಡ ಸಾಕಷ್ಟು ಮಹತ್ವ ಪಡ್ಕೋತಿದೆ. ಇಲ್ಲಿ ಏರ್‌ಸ್ಟ್ರೈಕ್‌ ಸರ್ಜಿಕಲ್‌ ಸ್ಟ್ರೈಕ್ ಘಟನೆಯನ್ನ ಉಲ್ಲೇಖಿಸಿ ಹೇಳಿದ್ದಾರಾ ಅಥವಾ ಭಾರತದ ಮೇಲೆ ಬರ್ತಿರೋ ಸುಫಾರಿ ಕಿಲ್ಲಿಂಗ್‌ ಆರೋಪಕ್ಕೆ ತಿರುಗೇಟು ಕೊಟ್ಟು, ಹೌದು ಮಾಡ್ತಿರೋದು ನಾವೇ ಅನ್ನೋ ಅರ್ಥದಲ್ಲಿ ಮೋದಿಯವರು ಈ ರೀತಿ ಹೇಳಿದ್ದಾರಾ ಅನ್ನೋ ದೊಡ್ಡ ಪ್ರಶ್ನೆ ಈಗ ಎಲ್ರನ್ನೂ ಕಾಡೋಕೆ ಶುರುವಾಗಿದೆ.

-masthmagaa.com

Contact Us for Advertisement

Leave a Reply