ದೇಶದ ಜನತೆಗೆ ಸಂಕ್ರಾಂತಿ ಗಿಫ್ಟ್: ಜ.13ರ ಒಳಗೆ ಲಸಿಕೆ ಅಭಿಯಾನ

masthmagaa.com:

ದೇಶದಲ್ಲಿ ‘ಕೋವಿಶೀಲ್ಡ್’ ಮತ್ತು ‘ಕೋವಾಕ್ಸಿನ್’​ ಲಸಿಕೆಗೆ DCGI ಜನವರಿ 3ನೇ ತಾರೀಖು ಅನುಮೋದನೆ ಕೊಟ್ಟಿತ್ತಲಾ.. ಇದೀಗ ಲಸಿಕೆಗೆ ಅನುಮೋದನೆ ಕೊಟ್ಟ 10 ದಿನಗಳ ಒಳಗಾಗಿ, ಅಂದ್ರೆ ಜನವರಿ 13 ಒಳಗಾಗಿ ಕೊರೋನಾ ಲಸಿಕೆಯನ್ನ ಹಾಕಲು ನಾವು ಸಿದ್ದರಿದ್ದೀವಿ ಅಂತ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ. ಆದ್ರೆ ಲಸಿಕೆ ಅಭಿಯಾನ ಯಾವಾಗ ಶುರು ಮಾಡ್ಬೇಕು ಅನ್ನೋ ಬಗ್ಗೆ ಕೇಂದ್ರ ಸರ್ಕಾರ ಫೈನಲ್ ಕಾಲ್ ಅಥವಾ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಅಂದ್ಹಾಗೆ ದೇಶದಲ್ಲಿ 4 ಪ್ರೈಮರಿ ವ್ಯಾಕ್ಸಿನ್ ಸ್ಟೋರ್​ಗಳಿವೆ.. ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಹರಿಯಾಣದ ಕರ್ನಲ್​.. ಇವುಗಳನ್ನ GMSD ಅಂತ ಕರೀತಾರೆ. ಇಲ್ಲಿಂದ ದೇಶದ 37 ವ್ಯಾಕ್ಸಿನ್​ ಸ್ಟೋರ್​ಗಳಿಗೆ ಲಸಿಕೆ ಪೂರೈಕೆ ಆಗುತ್ತೆ.. ಈ ಸ್ಟೋರ್​ಗಳಲ್ಲಿ ಕೊರೋನಾ ಲಸಿಕೆಯನ್ನ ಬಲ್ಕ್​ ಆಗಿ ಸಂಗ್ರಹಿಸಿಡಲಾಗುತ್ತೆ. ಈ ಸ್ಟೋರ್​​ಗಳಲ್ಲಿ ಶೇಖರಿಸಿಡುವ ಲಸಿಕೆಗಳ ನಂಬರ್ ಮತ್ತು ಟೆಂಪರೇಚರ್ ಟ್ರಾಕರ್​ಗಳನ್ನ ಡಿಜಿಟಲಿ ಮಾನಿಟರ್ ಮಾಡಲಾಗುತ್ತೆ. ಈ ಟೆಕ್ನಾಲಜಿ ನಮ್ಮ ಬಳಿ ಕಳೆದೊಂದು ದಶಕದಿಂದ ಇದೆ ಅಂತ ರಾಜೇಶ್ ಭೂಷಣ್ ಮಾಹಿತಿ ನೀಡಿದ್ದಾರೆ. ಇನ್ನು ಹೆಲ್ತ್​ಕೇರ್ ವರ್ಕರ್ಸ್ ಮತ್ತು ಫ್ರಂಟ್​​ಲೈನ್​ ವರ್ಕರ್ಸ್​ ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ತಮ್ಮ ಹೆಸರನ್ನ ರಿಜಿಸ್ಟರ್ ಮಾಡಿಕೊಳ್ಳುವ ಅಗತ್ಯವಿಲ್ಲ. ಉಳಿದವರಿಗೆ ಹೇಗೆ ಅನ್ನೋದನ್ನ ಮುಂದೆ ಹೇಳ್ತೀವಿ ಅಂತಾನೂ ಕೇಂದ್ರ ಸರ್ಕಾರ ಹೇಳಿದೆ.

-masthmagaa.com

Contact Us for Advertisement

Leave a Reply