ಭಾರತ-ಮಲೇಷ್ಯಾ ವ್ಯಾಪಾರ ವಹಿವಾಟು ಇನ್ಮುಂದೆ ಭಾರತೀಯ ರೂಪಾಯಿಯಲ್ಲಿ: ವಿದೇಶಾಂಗ ಸಚಿವಾಲಯ

masthmagaa.com:

ಭಾರತ ಮತ್ತು ಮಲೇಷ್ಯಾ ದೇಶಗಳು ತಮ್ಮ ವ್ಯಾಪಾರ ವಹಿವಾಟಿಗೆ ಇನ್ಮುಂದೆ ಇತರ ಕರೆನ್ಸಿಗಳ ಜೊತೆಗೆ ಭಾರತೀಯ ರೂಪಾಯಿಯನ್ನ ಬಳಸಬಹದು ಅಂತ ವಿದೇಶಾಂಗ ಸಚಿವಾಲಯ ತಿಳಿಸಿದೆ. ಜುಲೈ 2022ರಲ್ಲಿ ಭಾರತೀಯ ರೂಪಾಯಿಯಲ್ಲಿ ಅಂತಾರಾಷ್ಟ್ರೀಯ ವ್ಯಾಪಾರವನ್ನ ನಡೆಸೋಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಅವಕಾಶ ನೀಡಿತ್ತು. ಅದರ ಹಿನ್ನೆಲೆ ಈ ಕ್ರಮವನ್ನ ಕೈಗೊಳ್ಳಲಾಗಿದೆ. RBIನ ಈ ಕ್ರಮ ವ್ಯಾಪಾರದ ಬೆಳವಣಿಗೆಯನ್ನ ಸುಲಭಗೊಳಿಸೋಕೆ ಮತ್ತು ಭಾರತೀಯ ರೂಪಾಯಿಯಲ್ಲಿ ಜಾಗತಿಕ ವ್ಯಾಪಾರವನ್ನ ಬೆಂಬಲಿಸುವ ಗುರಿಯನ್ನ ಹೊಂದಿದೆ ಅಂತ ಸಚಿವಾಲಯ ಹೇಳಿದೆ. ಇನ್ನೊಂದ್‌ ಕಡೆ ಡಾಲರ್‌ ಶಾರ್ಟೇಜ್‌ನ್ನ ಫೇಸ್‌ ಮಾಡ್ತಿರೊ ದೇಶಗಳಿಗೆ ಭಾರತೀಯ ರೂಪಾಯಿಯಲ್ಲಿ ಟ್ರೇಡ್‌ ಮಾಡುವ ಪರ್ಯಾಯ ಮಾರ್ಗವನ್ನ ಭಾರತ ಆಫರ್‌ ಮಾಡೋಕೆ ಮುಂದಾಗಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಈಜಿಪ್ಟ್‌ ಡಾಲರ್‌ ಶಾರ್ಟೇಜ್‌ನ್ನ ಎದುರಿಸ್ತಿವೆ. ಹಾಗೂ ಭಾರತದ ಕರೆನ್ಸಿಯಲ್ಲಿ ಟ್ರೇಡ್‌ ಮಾಡೋಕೆ ಇಂಟರೆಸ್ಟ್‌ ತೋರಿಸಿವೆ ಅಂತ ಸರ್ಕಾರ ಹೇಳಿದೆ. ಅಂದ್ಹಾಗೆ ಭಾರತದ ರೂಪಾಯಿ ಅಂತಾರಾಷ್ಟ್ರೀಯ ಕರೆನ್ಸಿ ಆಗುವತ್ತ ದಾಪುಗಾಲು ಹಾಕ್ತಿದೆ. ಈಗಾಗಲೇ ಬೋಟ್ಸ್‌ವಾನಾ, ಫಿಜಿ, ಜರ್ಮನಿ, ಇಸ್ರೇಲ್‌, ಕೀನ್ಯಾ, ಮಲೇಷಿಯಾ, ಮಾರಿಷಸ್‌, ಮಯನ್ಮಾರ್‌, ನ್ಯೂಜಿಲ್ಯಾಂಡ್‌, ರಷ್ಯಾ, ಸಿಂಗಾಪುರ್‌, ಶ್ರೀಲಂಕಾ, ಯುಕೆ, ಉಗಾಂಡ ಸೇರಿದಂತೆ ಒಟ್ಟು 18 ರಾಷ್ಟ್ರಗಳು ಭಾರತದ ರೂಪಾಯಿಯನ್ನ ಅಕ್ಸೆಪ್ಟ್‌ ಮಾಡಿವೆ.

-masthmagaa.com

Contact Us for Advertisement

Leave a Reply