ಉದ್ವಿಗ್ನತೆ ನಡುವೆ ಭಾರತ-ಮಾಲ್ಡೀವ್ಸ್‌ ಹೈಲೆವೆಲ್‌ ಮೀಟಿಂಗ್‌!

masthmagaa.com:

ಭಾರತದ ಸೈನಿಕರನ್ನ ವಾಪಸ್‌ ಕರೆಸಿಕೊಳ್ಳೋಕೆ ಮಾಲ್ಡೀವ್ಸ್‌ ಡೆಡ್‌ಲೈನ್‌ ನೀಡಿದ ಬೆನ್ನಲ್ಲೇ ಉಭಯ ದೇಶಗಳ ಪ್ರಮುಖ ಅಧಿಕಾರಿಗಳು ಇದೀಗ ಹೈ ಲೆವೆಲ್‌ ಮೀಟಿಂಗ್‌ ಮಾಡಿದ್ದಾರೆ. ಇದ್ರಲ್ಲಿ ಎರಡೂ ದೇಶಗಳಿಗೆ ಉಪಯೋಗ ಆಗೋ ಹಾಗೆ ಸೊಲ್ಯೂಷನ್‌ ಕಂಡುಕೊಳ್ಳಲು ಚರ್ಚೆ ನಡೆಸಲಾಗಿದೆ. ಮಾಲ್ಡೀವ್ಸ್‌ನಲ್ಲಿ ಭಾರತೀಯ ಸೇನಾ ಸಿಬ್ಬಂದಿ ಸಕ್ರಿಯವಾಗಿ ಮುಂದುವರೆಯೋ ಬಗ್ಗೆ ಚರ್ಚೆ ನಡೆದಿದೆ. ಜೊತೆಗೆ ಉಭಯ ದೇಶಗಳ ದ್ವಿಪಕ್ಷೀಯ ಸಹಕಾರ, ಸಮಸ್ಯೆಗಳ ಬಗ್ಗೇನೂ ಡಿಸ್‌ಕಸ್‌ ಮಾಡಲಾಗಿದೆ. ಈ ಮೀಟಿಂಗ್‌ನಲ್ಲಿ ಮಾಲ್ಡೀವ್ಸ್‌ನಲ್ಲಿರೋ ಭಾರತೀಯ ಹೈ ಕಮಿಷನರ್‌ ಮುನು ಮಹಾವರ್‌ ಭಾಗಿಯಾಗಿದ್ರು. ಈ ವೇಳೆ ಮುಂದಿನ ಮೀಟಿಂಗ್‌ನ್ನ ಭಾರತದಲ್ಲಿ ನಡೆಸೋದಾಗಿ ಎರಡು ದೇಶಗಳು ಒಪ್ಪಿಕೊಂಡಿವೆ ಅಂತ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply