ನಾವ್ಯಾರ ಅಂಗಳದಲ್ಲಿಲ್ಲ! ಭಾರತಕ್ಕೆ ಟಾಂಟ್‌ ಕೊಟ್ಟ ಮಾಲ್ಡೀವ್ಸ್‌!

masthmagaa.com:

ಭಾರತ ಮಾಲ್ಡೀವ್ಸ್‌ ಸಂಬಂಧದಲ್ಲಿ ತೀವ್ರ ಬಿಕ್ಕಟ್ಟು ಉಂಟಾಗಿರೋ ಹೊತ್ತಲ್ಲೇ ಈ ಕಡೆ ಮಾಲ್ಡೀವ್ಸ್‌ ಅಧ್ಯಕ್ಷ ಮೊಯಿಝು ಮತ್ತೆ ಭಾರತದ ವಿರುದ್ದ ನಾಲಿಗೆ ಹರಿಬಿಟ್ಟಿದ್ದಾರೆ. ಚೀನಾ ಭೇಟಿ ನಂತ್ರ ಪ್ರೆಸ್‌ ಕಾನ್ಫರೆನ್ಸ್‌ನಲ್ಲಿ ಮಾತಾಡಿರೋ ಆತ ʻನಾವು ಪುಟ್ಟ ರಾಷ್ಟ್ರವಾಗಿರ್ಬೋದು, ಹಾಗಂತ ಯಾರಿಗೂ ನಮ್ಮನ್ನ ಬೆದರಿಸೋ ಹಕ್ಕಿಲ್ಲ. ನಮ್ಮನ್ನ ಹೆದರಿಸೋಕೆ ನಾವು ಯಾರಿಗೂ ಲೈಸೆನ್ಸ್‌ ಕೊಟ್ಟಿಲ್ಲ, ಅಂತ ಹೇಳೊ ಮೂಲಕ ಭಾರತವನ್ನ ಕೆಣಕೋ ಕೆಲಸ ಮಾಡಿದ್ದಾರೆ. ಹಿಂದೂ ಮಹಾಸಾಗರ, ಅಲ್ಲಿರೋ ಎಲ್ಲಾ ರಾಷ್ಟ್ರಗಳಿಗೆ ಸೇರಿರೋದು. ನಾವ್ಯಾರ ಅಂಗಳ‌ದಲ್ಲೂ ಇಲ್ಲ. ನಮ್ಮದು ಸ್ವತಂತ್ರ್ಯ ಮತ್ತು ಸಾರ್ವಭೌಮ ದೇಶ.. ನಮ್ಮಲ್ಲಿ ಒಂಬತ್ತು ಲಕ್ಷ ಚದರ ಕಿಮೀನಷ್ಟು ವಿಸ್ತಾರವಾದ ಸ್ಪೆಷಲ್ ಎಕಾನಾಮಿಕ್‌ ಜ಼ೋನ್‌ ಇದೆ. ಹಿಂದೂ ಮಹಾಸಾಗರದ ಅತೀ ಹೆಚ್ಚು ಪಾಲು ಹೊಂದಿರೋ ರಾಷ್ಟ್ರಗಳ ಪೈಕಿ ಮಾಲ್ಡೀವ್ಸ್‌ ಕೂಡ ಒಂದು. ಈ ಸಮುದ್ರ ಯಾವ್ದೇ ಒಂದು ದೇಶಕ್ಕೆ ಮಾತ್ರ ಸೇರಿರೋದಲ್ಲ ಇಲ್ಲಿ ನಮಗೂ ಹಕ್ಕಿದೆ, ನಮ್ಮನ್ನ ಯಾರೂ ಗುತ್ತಿಗೆ ಪಡೆದಿಲ್ಲ. ನಾವು ಯಾರಿಗೂ ಹೆದರಲ್ಲ ಅಂತ ಹೇಳಿದಾರೆ. ಈ ಮೂಲಕ ಭಾರತ ಹಾಗೂ ಮಾಲ್ಡೀವ್ಸ್‌ ಸಂಬಂಧಕ್ಕೆ ಮತ್ತಷ್ಟು ಹುಳಿ ಹಿಂಡಿದ್ದಾರೆ. ಜೊತೆಗೆ ಭಾರತವನ್ನ ಮತ್ತೆ ಕೆಣಕೋ ಕೆಲಸ ಮಾಡಿದಾರೆ. ಯಾಕಂದ್ರೆ ಇತ್ತೀಚಿಗಷ್ಟೇ ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯಿಂದ ಮಾಲ್ಡೀವ್ಸ್‌ನ ಸಚಿವರುಗಳು ಭಾರತದ ವಿರುದ್ದ ಅಸಂಸದೀಯ ಭಾಷೆ ಬಳಸಿ ಮಾತನಾಡಿದ್ರು. ಭಾರತ ಗಬ್ಬು ಅಂತೆಲ್ಲಾ ನಾಲಿಗೆ ಹರಿಬಿಟ್ಟಿದ್ರು. ಇದರಿಂದ ಎರಡೂ ದೇಶಗಳ ನಡುವೆ ಬಿಕ್ಕಟ್ಟು ಉಂಟಾಗಿತ್ತು. ಭಾರತದಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಶುರುವಾಗಿತ್ತು. ಈ ಹೊತ್ತಲ್ಲೇ ಈಗ ಮಾಲ್ಡೀವ್ಸ್‌ನ ಅಧ್ಯಕ್ಷ ನಮ್ಮನ್ನ ಯಾರೂ ಹೆದರಿಸೋಕೆ ಆಗಲ್ಲ ಅಂತ ಉದ್ದಟತನ ಮರೆದಿದ್ದಾರೆ. ಇನ್ನು ಮತ್ತೊಂದು ಕಡೆ ಅಧ್ಯಕ್ಷ ಮುಯಿಝುಗೆ ತಮ್ಮ ಮನೆಯಲ್ಲೇ ಮುಖಭಂಗವಾಗಿದೆ. ರಾಜಧಾನಿ ಮಾಲೆಯ ಮೇಯರ್‌ ಎಲೆಕ್ಷನ್‌ನಲ್ಲಿ ಭಾರತದ ಪರ ಇರೋ ಕ್ಯಾಂಡಿಡೇಟ್‌ ದೊಡ್ಡ ಅಂತರದಲ್ಲಿ ಗೆದ್ದು ಬೀಗಿದ್ದಾರೆ. ಮಾಲ್ಡೀವಿಯನ್‌ ಡೆಮಕ್ರಟಿಕ್‌ ಪಾರ್ಟಿ ಅಥ್ವಾ MDPಯ ಆಡಮ್‌ ಅಜಿಮ್‌ ಮೇಯರ್‌ ಚುನಾವಣೆಯಲ್ಲಿ ಗೆದ್ದು ಮಾಲೆಯ ಅಧಿಕಾರ ಹಿಡಿದಿದ್ದಾರೆ. ಈ ಮೂಲಕ ಮಾಲ್ಡೀವ್ಸ್‌ನ ಅರ್ಧ ಜನಸಂಖ್ಯೆ ಹೊಂದಿರೋ ಮಾಲೆ ನಗರದಲ್ಲಿ ಇನ್ಮೇಲೆ ಭಾರತ ಪರ ನಾಯಕ ಮೇಯರ್‌ ಆಗಿ ಆಡಳಿತ ನಡೆಸಲಿದ್ದಾರೆ. ಒಂದು ಕಡೆ ಮಾಲ್ಡೀವ್ಸ್‌ ಅಧ್ಯಕ್ಷ ಭಾರತ ವಿರೋಧಿಯಾಗಿ ಉದ್ದಟತನ ಮರೆಯುತ್ತಿದ್ದರೆ ಇನ್ನೊಂದು ಕಡೆ ಅಲ್ಲಿನ ಜನ ಭಾರತ ಪರ ನಾಯಕನನ್ನ ಮೇಯರ್‌ ಮಾಡಿರೋದು ಅವರ ಪಕ್ಷವನ್ನ ಗೆಲ್ಲಿಸಿರೋದು ತೀವ್ರ ಕುತೂಹಲ ಹಾಗೂ ಸಂಚನಲಕ್ಕೆ ಕಾರಣವಾಗಿದೆ. ಇನ್ನೊಂದು ಕಡೆ ಮಾಲ್ಡೀವ್ಸ್‌ನಲ್ಲಿರೋ ಭಾರತೀಯ ಹೈಕಮಿಷನರ್‌ ಕಚೇರಿ ಅಧಿಕಾರಿಗಳು ಮಾಲೆಯಲ್ಲಿ ಮಾಲ್ಡೀವ್ಸ್‌ ವಿದೇಶಾಂಗ ಅಧಿಕಾರಿಗಳನ್ನ ಮೀಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply