ಮಾಲ್ಡೀವ್ಸ್‌ ಟ್ರಿಪ್‌ ಕ್ಯಾನ್ಸಲ್‌! ಚೋಲೆ ಭಟುರೆ ಸಿಕ್ತು ಹೋಲ್‌ಸೇಲ್‌!

masthmagaa.com:

ಭಾರತ-ಮಾಲ್ಡೀವ್ಸ್‌ ವಿವಾದ ಎದ್ದಾಗಿನಿಂದ, ಭಾರತೀಯರು ಒಂದೊಂದು ರೀತಿಯಲ್ಲಿ ದೇಶಕ್ಕೆ ಸಪೋರ್ಟ್‌ ನೀಡೋ ಕೆಲಸ ಮಾಡಿದ್ದಾರೆ. ʻಬಾಯ್ಕಾಟ್‌ ಮಾಲ್ಡೀವ್ಸ್‌ʼ ಶುರುಹಚ್ಕೊಂಡ್ರು, ದೇಶದಲ್ಲಿರೋ ಬೀಚ್‌ಗಳನ್ನ ಪ್ರೊಮೋಟ್‌ ಮಾಡೋಕೆ ಸ್ಟಾರ್ಟ್‌ ಮಾಡಿದ್ರು. ಆದ್ರೆ ಇದೀಗ ವಿಚಿತ್ರ ಅನ್ನೋ ಹಾಗೇ ಉತ್ತರ ಪ್ರದೇಶದ ನೋಯ್ಡಾದ ರೆಸ್ಟೋರೆಂಟ್‌ ಒಂದು, ಯಾರೆಲ್ಲಾ ಮಾಲ್ಡೀವ್ಸ್‌ಗೆ ಹೋಗೋ ಪ್ಲಾನ್‌ ಕ್ಯಾನ್ಸಲ್‌ ಮಾಡಿದ್ರೋ, ಅವ್ರಿಗೆಲ್ಲಾ ಫ್ರೀಯಾಗಿ ಚೋಲೆ ಭಟುರೆ ಕೊಡ್ತಿದೆ. ನೊಯ್ಡಾದ ʻಮಿಸ್ಟರ್‌ ಭಟುರಾʼ ಅನ್ನೋ ರೆಸ್ಟೋರೆಂಟ್‌ನಲ್ಲಿ ಮಾಲ್ಡೀವ್ಸ್‌ಗೆ ಹೋಗೋ ಟಿಕೆಟ್ಸ್‌ ಕ್ಯಾನ್ಸಲ್‌ ಮಾಡಿದ ಪ್ರೂಫ್‌ ತೋರಿಸಿದ್ರೆ ಸಾಕು, ಫ್ರೀಯಾಗಿ ಚೋಲೆ ಭಟುರೆ ಸವಿಬೋದು. ಒಟ್ನಲ್ಲಿ ಡಿಫರೆಂಟ್‌ ಆಗಿ ಚೋಲೆ ಭಟುರೆ ಮೂಲಕ ಒಗ್ಗಟ್ಟು ತೋರಿಸೋ ಕೆಲಸವನ್ನ ಈ ರೆಸ್ಟೋರೆಂಟ್‌ ಮಾಡಿದೆ.

-masthmagaa.com

Contact Us for Advertisement

Leave a Reply