8 ಲಕ್ಷ ಕೋಟಿ ವಿದೇಶಿ ನೇರ ಹೂಡಿಕೆ ಪಡೆಯುವತ್ತ ಭಾರತ: ಸರ್ಕಾರ

masthmagaa.com:

ಭಾರತ ಮುಂದಿನ ದಿನಗಳಲ್ಲಿ ನೂರು ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 8 ಲಕ್ಷ ಕೋಟಿ ರುಪಾಯಿ ವಿದೇಶಿ ನೇರ ಹೂಡಿಕೆಯನ್ನ ಆಕರ್ಷಿಸೋಕೆ ನೋಡ್ತಿದೆ ಅಂತ ಸರ್ಕಾರ ಹೇಳಿದೆ. ಆರ್ಥಿಕ ಸುಧಾರಣೆ ಮತ್ತು ಈಸ್‌ ಆಫ್‌ ಡೂಯಿಂಗ್‌ ಬ್ಯುಸಿನೆಸ್‌ ಅಂದ್ರೆ ವ್ಯಾಪಾರ ಮಾಡೋಕೆ ಸರಳ ವ್ಯವಸ್ಥೆ ನಿರ್ಮಿಸಿದ್ದರಿಂದ 101 ದೇಶಗಳಿಂದ 31 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 57 ಕ್ಷೇತ್ರಗಳಲ್ಲಿ FDI ಹೂಡಿಕೆ ಬಂದಿದೆ ಅಂತ ಕೇಂದ್ರ ವ್ಯಾಪಾರ ಮತ್ತು ವಾಣಿಜ್ಯ ಇಲಾಖೆ ಹೇಳಿದೆ. ಅಂದ್ಹಾಗೆ ಕಳೆದ ಆರ್ಥಿಕ ವರ್ಷದಲ್ಲಿ ಭಾರತಕ್ಕೆ ಅತಿಹೆಚ್ಚು ಅಂದ್ರೆ 6.68 ಲಕ್ಷ ಕೋಟಿ ರುಪಾಯಿ FDI ಹರಿದುಬಂದಿತ್ತು.

-masthmagaa.com

Contact Us for Advertisement

Leave a Reply