ಚೀನಾ ಮೇಲೆ ಹದ್ದಿನ ಕಣ್ಣಿಡಲು ಸಜ್ಜಾದ ಭಾರತ!

masthmagaa.com:

ಹಿಂದೂ ಮಾಹಾಸಾಗರದಲ್ಲಿ ತನ್ನ ಪ್ರಾಬಲ್ಯವನ್ನ ಹೆಚ್ಚಿಸಲು ಕುತಂತ್ರ ಹೆಣಿತಿರೋ ಚೀನಾವನ್ನ ಎದುರಿಸಲು ಭಾರತ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದಲ್ಲಿ ಹೆಚ್ಚಿನ ಸೇನಾಪಡೆಗಳನ್ನ ಭಾರತ ನಿಯೋಜಿಸಿದೆ. ಇತ್ತೀಚೆಗೆ ಅಂಡಮಾನ್‌ ನಿಕೋಬಾರ್‌ಗೆ ಸಮೀಪವಿರುವ ಕೋಕೊ ದ್ವೀಪದಲ್ಲಿ ಮಯನ್ಮಾರ್‌ ತನ್ನ ಸೇನಾ ಚಟುವಟಿಕೆಗಳನ್ನ ಹೆಚ್ಚಿಸುತ್ತಿದೆ ಅಂತ ವರದಿಯಾಗಿತ್ತು. ಮಯನ್ಮಾರ್‌ನ ಈ ಚಟುವಟಿಕೆಗಳ ಹಿಂದೆ ಚೀನಾ ಕೈವಾಡವಿರ್ಬೋದು ಅಂತ ಶಂಕಿಸಲಾಗಿತ್ತು. ಈ ನಿಟ್ಟಿನಲ್ಲಿ ಚೀನಾದ ಮೇಲೆ ಕಣ್ಣಿಡಲು ಸೇನೆಯನ್ನ ನಿಯೋಜನೆ ಮಾಡಲಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply