ಕಚ್ಚಾ ತೈಲದ ಮೇಲಿನ ʻವಿಂಡ್‌ ಫಾಲ್‌ ತೆರಿಗೆʼ ಏರಿಸಿದ ಸರ್ಕಾರ!

masthmagaa.com:

ಪೆಟ್ರೋಲ್‌, ಡೀಸೆಲ್‌ ಬೆಲೆ ಇಳೀಬಹುದು ಅನ್ನೋ ಸುದ್ದಿಗಳ ನಡುವೆ ಕೇಂದ್ರ ಸರ್ಕಾರ ಕಚ್ಚಾ ತೈಲದ ಮೇಲಿನ ʻವಿಂಡ್‌ ಫಾಲ್‌ ತೆರಿಗೆʼಯನ್ನ ಮತ್ತೆ ಏರಿಕೆ ಮಾಡಿದೆ. ಅಂದ್ಹಾಗೆ ಯಾವುದೇ ಒಂದು ವಸ್ತುವಿಗೆ ದಿಢೀರ್‌ ಅಂತ ಡಿಮ್ಯಾಂಡ್‌ ಬಂದು ಇದಕ್ಕಿದ್ದಂತೆ ಅದಕ್ಕೆ ಜಾಸ್ತಿ ಪ್ರಾಫಿಟ್‌ ಬರೋಕೆ ಶುರುವಾದ್ರೆ ಸರ್ಕಾರ ಅದಕ್ಕೆ ಎಕ್ಸ್‌ಟ್ರಾ ಟ್ಯಾಕ್ಸ್‌ ಹಾಕ್ಬಹುದು. ಅದನ್ನ ವಿಂಡ್‌ ಫಾಲ್‌ ಟ್ಯಾಕ್ಸ್‌ ಅಂತ ಕರೀತಿವಿ. (ಕೋವಿಡ್‌ ಉದಾಹರಣೆ) 2022ರ ಜುಲೈನಲ್ಲಿ ಭಾರತದ ಖಾಸಗಿ ಆಯಿಲ್‌ ರಿಫೈನರಿಗಳು ದೇಶ ಬಿಟ್ಟು ಹೊರಗಡೆ ತೈಲ ಜಾಸ್ತಿ ಮಾರ್ತಿವೆ ಅಂತೇಳಿ ಸರ್ಕಾರ ಕಚ್ಚಾ ತೈಲ, ATF ಮುಂತಾದವುಗಳ ಮೇಲೆ ಈ ವಿಂಡ್‌ ಫಾಲ್‌ನ್ನ ವಿಧಿಸಿತ್ತು. ನಂತ್ರ ಅದನ್ನ ಸ್ವಲ್ಪ ಕಡಿಮೆ ಮಾಡಿತ್ತು. ಈಗ ಮತ್ತೆ ಕಚ್ಚಾ ತೈಲದ ಮೇಲೆ ಟನ್‌ಗೆ ₹1,700 ಇದ್ದ ವಿಂಡ್‌ ಫಾಲ್‌ ಟ್ಯಾಕ್ಸ್‌ನ್ನ ₹3,200ಗೆ ಏರಿಸಿದೆ. ಆದ್ರೆ ATF ಏವಿಯೇಷನ್‌ ಟರ್ಬೈನ್‌ ಫ್ಯೂಲ್‌ ಅಥವಾ ವಿಮಾನಕ್ಕೆ ಹಾಕೋ ಎಣ್ಣೆಗೆ ಯಾವುದೇ ಬದಲಾವಣೆ ಮಾಡಿಲ್ಲ. ಇವೆಲ್ಲ ಇವತ್ತಿನಿಂದಲೆ ಜಾರಿಯಾಗುತ್ವೆ. ಸಾಮಾನ್ಯವಾಗಿ ಭಾರತದಲ್ಲಿ, ಜಾಗತಿಕ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ $75 ಆದಾಗ ಈ ವಿಂಡ್‌ಫಾಲ್‌ ತೆರಿಗೆ ಹಾಕ್ತಾರೆ.

-masthmagaa.com

Contact Us for Advertisement

Leave a Reply