ದೇಶದಲ್ಲಿ ಬರೋಬ್ಬರಿ 5 ತಿಂಗಳ ಬಳಿಕ ಈ ದಾಖಲೆ ಬರೆದ ಕೊರೋನಾ

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 32,080 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದು, 402 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 97.35 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 1,41,360 ಆಗಿದೆ.

ಕಳೆದ 24 ಗಂಟೆಗಳಲ್ಲಿ 36,000+ ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 92.15 ಲಕ್ಷ ದಾಟಿದೆ. ದೇಶದಲ್ಲಿ ಇನ್ನೂ ಕೂಡ 3.78 ಲಕ್ಷ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜುಲೈ 19ರ ಬಳಿಕ ಸಕ್ರಿಯ ಪ್ರಕರಣಗಳು ಈ ಮಟ್ಟಕ್ಕೆ ಕುಸಿದಿರೋದು ಇದೇ ಮೊದಲು. ಭಾರತದಲ್ಲಿ ಗುಣಮುಖ ಪ್ರಮಾಣ 94.66%ಗೆ ಏರಿಕೆಯಾಗಿದ್ದು, ಸಾವಿನ ಪ್ರಮಾಣ 1.45% ಇದೆ. ಡಿಸೆಂಬರ್ 8ರಂದು 10.22 ಲಕ್ಷ ಕೊರೋನಾ ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 14.98 ಕೋಟಿ ಟೆಸ್ಟ್​ಗಳನ್ನ ನಡೆಸಿದಂತಾಗಿದೆ.

-masthmagaa.com

Contact Us for Advertisement

Leave a Reply