masthmagaa.com:

ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಜೋರಾಗೇ ಎದ್ದಿದೆ. ಯಾಕಂದ್ರೆ ಕಳೆದ 24 ಗಂಟೆಗಳಲ್ಲಿ 35,871 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ. 102 ದಿನಗಳ​ ಬಳಿಕ ದೃಢಪಟ್ಟ ಅತಿ ಹೆಚ್ಚು ಪ್ರಕರಣ ಇದಾಗಿದೆ. ಕಳೆದ 24 ಗಂಟೆಗಳಲ್ಲಿ 172 ಸೋಂಕಿತರು ಮೃಪಟ್ಟಿದ್ದು, ಕೇವಲ 17,741 ಸೋಂಕಿತರು ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 23,000 ಪ್ರಕರಣ ವರದಿಯಾಗಿದೆ. ಅಂದ್ರೆ 65 ಪರ್ಸೆಂಟ್​ ಕೇಸಸ್​ ಮಹಾರಾಷ್ಟ್ರದ್ದೇ ಇದೆ. ನಿನ್ನೆಯಷ್ಟೇ ಪ್ರಧಾನಿ ವಿವಿಧ ರಾಜ್ಯದ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಕೊರೋನಾದ ಈ ಅಲೆಯನ್ನ ಇಲ್ಲೇ ನಿಲ್ಲಿಸಬೇಕು. ಇಲ್ಲದಿದ್ರೆ ಇದು ದೇಶವ್ಯಾಪಿ ಸ್ಫೋಟಗೊಳ್ಳಲಿದೆ ಅಂತ ಎಚ್ಚರಿಸಿದ್ದರು.

ಭಾರತದ ಕೊರೋನಾ ನಂಬರ್ಸ್:

ಒಟ್ಟು ಪ್ರಕರಣ: 1.14 ಕೋಟಿ

ಒಟ್ಟು ಗುಣಮುಖ: 1.10 ಕೋಟಿ

ಒಟ್ಟು ಸಾವು: 1,59,216

ಸಕ್ರಿಯ ಪ್ರಕರಣ: 2,52,364

ಒಟ್ಟು ಲಸಿಕೆ ಪಡೆದವರು: 3.71 ಕೋಟಿ

-masthmagaa.com

Contact Us for Advertisement

Leave a Reply