ದೇಶದಲ್ಲಿ ಕೊರೋನಾ ದಾಖಲೆ, ಅಪಾಯದಲ್ಲಿದೆ ಬೆಂಗಳೂರು!

masthmagaa.com:

ಕೊರೋನಾ ಎರಡನೇ ಅಲೆಗೆ ತತ್ತರಿಸುತ್ತಿರೋ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 53,476 ಜನರಿಗೆ ಸೋಂಕು ತಗುಲಿದೆ. 153 ದಿನಗಳ ಬಳಿಕ ಅಂದ್ರೆ 5 ತಿಂಗಳ ಬಳಿಕ ದೃಢಪಟ್ಟ ಅತಿಹೆಚ್ಚು ಪ್ರಕರಣ ಇದಾಗಿದೆ. ಹಾಗೇ 251 ಸೋಂಕಿತರು ಮೃತಪಟ್ಟಿದ್ದಾರೆ. ಗುಣಮುಖ ಆಗಿರೋದು ಕೇವಲ 26,490 ಸೋಂಕಿತರು ಅಷ್ಟೇ.

ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 31 ಸಾವಿರ ಜನರಿಗೆ ಸೋಂಕು ತಗುಲಿದೆ. ಕಳೆದ ವರ್ಷದ ನಂಬರ್ಸ್​​ ಅನ್ನೂ ಕೂಡ ಪರಿಗಣಿಸಿದ್ರೆ ಇದುವರೆಗಿನ ಹೈಯೆಸ್ಟ್ ಇದು. ಮುಂಬೈ ಒಂದರಲ್ಲೇ 5 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ.

ಇನ್ನು ದೇಶದಲ್ಲಿ ಸಕ್ರಿಯ ಪ್ರಕರಣ ಹೆಚ್ಚಿರುವ 10 ಜಿಲ್ಲೆಗಳನ್ನ ಕೇಂದ್ರ ಆರೋಗ್ಯ ಇಲಾಖೆ ಗುರುತಿಸಿದೆ. ಇದರಲ್ಲಿ 9 ಜಿಲ್ಲೆಗಳು ಮಹಾರಾಷ್ಟ್ರದ್ದೇ ಆಗಿದ್ದರೆ, ಒಂದು ಜಿಲ್ಲೆ ಕರ್ನಾಟಕದ್ದಾಗಿದೆ. ಅದೇ ಬೆಂಗಳೂರು ನಗರ..

ಟಾಪ್​-10 ಜಿಲ್ಲೆಗಳು:

  1. ಪುಣೆ – 43,000+
  2. ನಾಗ್ಪುರ್​ – 33,000+
  3. ಮುಂಬೈ – 26,000+
  4. ಥಾಣೆ – 22,000+
  5. ನಾಸಿಕ್ – 15,000+
  6. ಔರಂಗಬಾದ್ – 15,000+
  7. ಬೆಂಗಳೂರು – 10,000+
  8. ನಾಂದೆಡ್​ – 10,000+
  9. ಜಲ್​ಗಾಂವ್ – 6,000+
  10. ಅಕೋಲ – 5,000+

-masthmagaa.com

Contact Us for Advertisement

Leave a Reply