ಉಲ್ಟಾ ಹೊಡೆದ ರಷ್ಯಾ: ಭಾರತಕ್ಕಿಲ್ಲ ರಿಯಾಯಿತಿ ದರದ ತೈಲ

masthmagaa.com:

ಯುಕ್ರೇನ್‌ ಯುದ್ಧ ಶುರುವಾದ್ಮೇಲೆ ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ನಿರ್ಬಂಧ ಹೇರಿದ್ವು. ರಷ್ಯಾ ಉತ್ಪಾದಿಸೋ ತೈಲಕ್ಕೆ ಡಿಮ್ಯಾಂಡ್‌ ಬಿದ್ದೋಗಿತ್ತು. ಆ ಟೈಮಲ್ಲಿ ರಷ್ಯಾ ಜೊತೆ ದಶಕಗಳ ಒಳ್ಳೇ ಸಂಬಂಧ ಹೊಂದಿದ್ದ ಭಾರತ ರಷ್ಯಾ ನೆರವಿಗೆ ನಿಲ್ತು. ಅದುವರೆಗೆ ಮಿಡ್ಲ್‌ ಈಸ್ಟ್‌ ದೇಶಗಳಿಂದ ಹೆಚ್ಚಾಗಿ ತೈಲ ಆಮದು ಮಾಡ್ಕೊಳ್ತಿದ್ದ ಭಾರತ, ಯುಕ್ರೇನ್‌ ಯುದ್ಧ ಶುರುವಾದ್ಮೇಲೆ ರಷ್ಯಾ ಕಡೆ ಮುಖ ಮಾಡ್ತು. ರಷ್ಯಾನೂ ರಿಯಾಯಿತಿ ಬೆಲೆಯಲ್ಲಿ ಭಾರತಕ್ಕೆ ತೈಲ ಒದಗಿಸೋಕೆ ಶುರು ಮಾಡ್ತು. ರಿಸೆಂಟಾಗಿ ವಿದೇಶಾಂಗ ಸಚಿವ ಜೈಶಂಕರ್‌ ರಷ್ಯಾ ಅಧ್ಯಕ್ಷ ಪುಟಿನ್‌ ಭೇಟಿ ಮಾಡ್ದಾಗ್ಲೂ ಭಾರತ-ರಷ್ಯಾಗಳ ತೈಲ ವ್ಯಾಪಾರದ ಅಭಿವೃದ್ಧಿ ಬಗ್ಗೆ ಖುದ್ಧು ಪುಟಿನ್ನೇ ಮಾತಾಡಿದ್ರು. ಆದ್ರೆ ಮೂರೇ ದಿನಕ್ಕೆ ಏನಾಯ್ತೋ ಗೊತ್ತಿಲ್ಲ. ರಷ್ಯಾ ಭಾರತಕ್ಕೆ ಫಿಕ್ಸ್‌ ಮಾಡಿದ್ದ ರಿಯಾಯಿತಿ ದರವನ್ನ ಕಟ್‌ ಮಾಡಿದೆ. ಬದಲಾಗಿ ಹೆಚ್ಚಿನ ದರ ಫಿಕ್ಸ್‌ ಮಾಡಿದೆ ಅಂತ ಖುದ್ದು ಕೇಂದ್ರ ತೈಲ ಮಂತ್ರಿ ಹರ್ದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ. ಕೆಲವು ದಿನಗಳಿಂದ ಭಾರತ ಪೇಮೆಂಟ್‌ ಮಾಡದೆ ತೈಲ ಪೂರೈಕೆ ಆಗೋದು ನಿಂತಿದೆ, ಶ್ರೀಲಂಕಾ ಬಳಿ ರಷ್ಯಾದಿಂದ ಬಂದ ಕಚ್ಚಾ ತೈಲ ಹೊತ್ತ ನೌಕೆಗಳು ಬೀಡಿ ಬಿಟ್ಟಿವೆ ಅಂತ ಹೇಳಲಾಗ್ತಿತ್ತು. ಆದ್ರೆ ಸಚಿವ ಪುರಿ ಇದನ್ನ ಅಲ್ಲಗಳೆದಿದ್ದಾರೆ. ಅಲ್ಲದೆ ಇದು ಶುದ್ಧ ʻಪ್ರೈಸ್‌ʼ ಅಥ್ವಾ ದರದ ವಿಚಾರ ಅಂದಿದ್ದಾರೆ. ಭಾರತದ ಗ್ರಾಹಕರಿಗೆ ಅಡಚಣೆ ಇಲ್ಲದ, ಅತ್ಯಂತ ರೀಸನಬಲ್‌ ಬೆಲೆಯಲ್ಲಿ ತೈಲ ಒದಗಿಸ್ಬೇಕು ಅನ್ನೋದೊಂದೆ ಸರ್ಕಾರದ ಗುರಿ ಅಂದಿದ್ದಾರೆ. ಇದೀಗ ಕಳೆದ 11 ತಿಂಗಳಿಂದ ಪೂರೈಕೆಯಾಗ್ತಿದ್ದ ಬೆಲೆಗಿಂತ ಹೆಚ್ಚಿನ ಬೆಲೆ ಕೊಡಿ ಅಂತ ರಷ್ಯಾ ಕೇಳ್ತಾ ಇದೆ. ಇದಕ್ಕೆ ಒಂದು ರೀತೀಲಿ ಅಮೆರಿಕ ಕೂಡ ಕಾರಣ. ಯಾಕಂದ್ರೆ ರಷ್ಯಾ ತೈಲವನ್ನ ಹೊತ್ತೊಯ್ಯೋ ಕೆಲವು ನೌಕೆಗಳು ಹಾಗೂ ಶಿಪ್ಪಿಂಗ್‌ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದೆ. ಪ್ರತಿ ಬ್ಯಾರಲ್‌ ಕಚ್ಚಾ ತೈಲಕ್ಕೆ 60 ಡಾಲರ್‌ ಲೆಕ್ಕದಲ್ಲಿ ಸಪ್ಲೈ ಮಾಡ್ಬೇಕು ಅಂತ G-7 ಒಕ್ಕೂಟ ರೇಟ್‌ ಫಿಕ್ಸ್‌ ಮಾಡಿದೆ. ಈ ರೂಲ್ಸನ್ನ ಫಾಲೋ ಮಾಡಿಲ್ಲ ಅಂತ ಅಮೆರಿಕ ಕೆಲವು ಶಿಪ್ಪಿಂಗ್‌ ಕಂಪನಿಗಳ ಮೇಲೆ ನಿರ್ಬಂಧ ಹೇರಿದೆ. ಇದ್ರ ಜೊತೆ, ರಷ್ಯಾ ಭಾರತದ ಬಳಿ ಚೀನಾದ ʻಯುಆನ್ʼ ಕರೆನ್ಸಿಯಲ್ಲಿ ಪೇಮೆಂಟ್‌ ಮಾಡಿ ಅಂತ ಕೇಳ್ತಿದೆ ಅನ್ನೋ ಸುದ್ಧೀನು ಹರಿದಾಡ್ತಿದೆ. ಇವೆಲ್ಲಾ ಕಾರಣಗಳಿಂದ ಕಳೆದ 11 ತಿಂಗಳಲ್ಲೇ ಮೊದಲ ಬಾರಿಗೆ ರಷ್ಯನ್‌ ತೈಲ ಆಮದಿನಲ್ಲಿ ಕುಸಿತ ಕಂಡಿದೆ. ಆದ್ರೆ ಇದ್ರಿಂದ ಸದ್ಯಕ್ಕೆ ಭಾರತಕ್ಕೆ ಹೊಡೆತ ಬೀಳೋ ತರ ಕಾಣ್ತಿಲ್ಲ. ಯಾಕಂದ್ರೆ ಕೆಲವು ದೇಶಗಳು ಭಾರತಕ್ಕೆ ರಷ್ಯಾಗಿಂದ ಕಡಿಮೆ ದರದಲ್ಲಿ ತೈಲ ಪೂರೈಕೆ ಮಾಡೋಕೆ ರೆಡಿ ಇವೆ ಅಂತ ಸಚಿವ ಹರ್ದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ. ಗ್ಲೋಬಲ್ ಮಾರ್ಕೆಟ್‌ನಲ್ಲಿ ಬೇಕಾದಷ್ಟು ತೈಲ ಇದೆ. ತೈಲ ಪೂರೈಕೆಯಲ್ಲಿ ಯಾವುದೇ ತೊಂದರೆ ಉಂಟಾಗಲ್ಲ ಅಂತ ಪುರಿ ಹೇಳಿದ್ದಾರೆ. ಯಾವ ದೇಶಗಳು ಭಾರತ ಜೊತೆ ವ್ಯಾಪಾರ ಮಾಡ್ತವೆ ಅಂತ ಹೇಳಿಲ್ಲ. ಆದ್ರೆ ಈಗಾಗ್ಲೆ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಸೌದಿ ಅರೇಬಿಯಾ ಕಡೆ ಮುಖ ಮಾಡಿವೆ ಅನ್ನೋ ಸುದ್ಧಿ ಹರಿದಾಡಿದೆ.

-masthmagaa.com

Contact Us for Advertisement

Leave a Reply