ಭಾರತ ಚೀನಾದ ಜೊತೆಗಿನ ವಿವಾದಗಳನ್ನ ಶಾಂತಿಯುತವಾಗಿ ಪರಿಹರಿಸಲು ಬೆಂಬಲಿಸುತ್ತದೆ: ಮೋದಿ

masthmagaa.com:

ಜಪಾನ್‌ನ ಹಿರೋಷಿಮಾದಲ್ಲಿ ನಡೆಯುತ್ತಿರುವ ಜಿ7 ರಾಷ್ಟ್ರಗಳ ಸಭೆಯಲ್ಲಿ ವಿಶೇಷ ಅಹ್ವಾನಿತರಾಗಿ ಭಾಗವಹಿಸಿರುವ ನರೇಂದ್ರ ಮೋದಿ ಭಾರತ ತನ್ನ ಸಾರ್ವಭೌಮತ್ವವನ್ನ ಕಾಪಾಡಿಕೊಳ್ಳಲು ಬದ್ಧವಾಗಿದೆ ಅಂತ ಹೇಳಿದ್ದಾರೆ. ಇದೇ ವೇಳೆ ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರದಲ್ಲಿ ಚೀನಾದ ಮಿಲಿಟರಿ ವಿಸ್ತರಣೆ ಹಾಗೂ ಹೆಚ್ಚುತ್ತಿರುವ ಉದ್ವಿಗ್ನತೆಯನ್ನ ಭಾರತ ಹೇಗೆ ನಿಭಾಯಿಸುತ್ತೆ ಅನ್ನೊ ಪ್ರಶ್ನೆಗೆ ಮೋದಿ ಉತ್ತರಿಸಿದ್ದಾರೆ. ಭಾರತ ತನ್ನ ಸಾರ್ವಭೌಮತ್ವವನ್ನು ಗೌರವಿಸುತ್ತದೆ, ವಿವಾದಗಳನ್ನ ಶಾಂತಿಯುತವಾಗಿ ಪರಿಹರಿಸಲು ಬೆಂಬಲಿಸುತ್ತದೆ. ಅಂತಾರಾಷ್ಟ್ರೀಯ ಕಾನೂನಿಗೂ ಭಾರತ ಬದ್ಧವಾಗಿದೆ. ಅಂತಾರಾಷ್ಟ್ರೀಯ ಕಾನೂನಿನ ಆಧಾರದ ಮೇಲೆ ಸಮುದ್ರ ವಿವಾದಗಳನ್ನ ಶಾಂತಿಯುತವಾಗಿ ಪರಿಹರಿಸಿಕೊ‍ಳ್ಳಲು ಉತ್ತೇಜನ ನೀಡುತ್ತೆ ಅಂತ ಮೋದಿ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply