ಭಾರತದ ʻಪ್ರಳಯ್‌ʼ ಕ್ಷಿಪಣಿ ಯಶಸ್ವಿ ಉಡಾವಣೆ!

masthmagaa.com:

ಭಾರತ ತನ್ನ ಭದ್ರತೆ ಹೆಚ್ಚಿಸಿಕೊಳ್ಳುವ ಕೆಲಸವನ್ನ ಮುಂದುವರೆಸಿದೆ. ʻಪ್ರಳಯ್‌ʼ ಅನ್ನೋ ಸರ್ಫೇಸ್‌-ಟು-ಸರ್ಫೇಸ್‌ ಶಾರ್ಟ್‌ ರೇಂಜ್‌ ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಒಡಿಶಾದ ಕರಾವಳಿಯಲ್ಲಿರೋ ಅಬ್ದುಲ್‌ ಕಲಾಂ ದ್ವೀಪದಲ್ಲಿ ಬೆಳಿಗ್ಗೆ 9:50ಕ್ಕೆ ಈ ಉಡಾವಣೆ ನಡೆಸಲಾಗಿದ್ದು, ಈ ಮಿಸೈಲ್‌ ತನ್ನೆಲ್ಲಾ ಗುರಿ ಮುಟ್ಟುವಲ್ಲಿ ಸಕ್ಸಸ್‌ ಆಗಿದೆ ಅಂತ ರಕ್ಷಣಾ ಅಧಿಕಾರಿಯೊಬ್ರು ತಿಳಿಸಿದ್ದಾರೆ. ಅಂದ್ಹಾಗೆ ಈ ಕ್ಷಿಪಣಿಯನ್ನ ಡಿಫೆನ್ಸ್‌ ರಿಸರ್ಚ್‌ ಡೆವೆಲಪ್‌ಮೆಂಟ್‌ ಆರ್ಗನೈಸೇಶನ್‌ (DRDO) ಡೆವಲಪ್‌ ಮಾಡಿದೆ. ಇದನ್ನ ಭಾರತ-ಪಾಕ್‌ ಗಡಿ (LoC) ಮತ್ತು ಭಾರತ-ಚೀನಾ ಗಡಿ (LAC) ನಲ್ಲಿ ಉಪಯೋಗಿಸೋದಕ್ಕೆ ಡೆವೆಲಪ್‌ ಮಾಡಲಾಗಿದೆ ಅಂತ ತಿಳಿಸಿದ್ದಾರೆ. ಇನ್ನು ʻಪ್ರಳಯ್‌ʼ ಕ್ಷಿಪಣಿಯು 500 ರಿಂದ 1000 ಕೆಜಿ ಪೇಲೋಡ್‌ ಸಾಮರ್ಥ್ಯವನ್ನ ಹೊಂದಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply