ಮಾಲ್ಡೀವ್ಸ್‌ ನಂತರ ಶ್ರೀಲಂಕಕ್ಕೆ ಈರುಳ್ಳಿ ನೀಡಲು ಮುಂದಾದ ಭಾರತ!

masthmagaa.com:

ದಿನದ ಹಿಂದಷ್ಟೇ ಮಾಲ್ಡೀವ್ಸ್‌ಗೆ ಅಪಾರ ಪ್ರಮಾಣದಲ್ಲಿ ಅಗತ್ಯ ವಸ್ತುಗಳನ್ನ ಸಪ್ಲೈ ಮಾಡಿ ಭಾರತ ನೆರೆಹೊರೆಯ ದೇಶಗಳಿಗೆ ಅದೆಷ್ಟು ಪ್ರಾಮುಖ್ಯತೆ ಕೊಡುತ್ತೆ ಅನ್ನೋದು ತಿಳಿಸಿತ್ತು. ಇದೀಗ ಪುನಃ ಭಾರತ ತನ್ನ ನೇಬರ್‌ಹುಡ್‌ ಫರ್ಸ್ಟ್‌ ಪಾಲಿಸಿಗೆ ಕಮಿಟ್‌ ಆಗಿರೋ ಬಗ್ಗೆ ಪ್ರೂವ್‌ ಮಾಡಿದೆ. ದ್ವೀಪರಾಷ್ಟ್ರ ಶ್ರೀಲಂಕಕ್ಕೆ ಸಾವಿರಾರು ಮೆಟ್ರಿಕ್‌ ಟನ್‌ಗಳಷ್ಟು ಈರುಳ್ಳಿ ಸಪ್ಲೈ ಮಾಡೋಕೆ ಪ್ಲಾನ್‌ ಮಾಡಿದೆ. ಅಷ್ಟೇ ಅಲ್ದೇ ಮಿತ್ರರಾಷ್ಟ್ರ ಯುಎಇಗೆ ಕೂಡ ಹೆಚ್ಚುವರಿ 10,000 ಮೆಟ್ರಿಕ್‌ ಟನ್‌ಗಳಷ್ಟು ಈರುಳ್ಳಿ ಪೂರೈಕೆಗೆ ಏಪ್ರಿಲ್‌ 03ರಂದು ಭಾರತ ಅನುಮತಿ ನೀಡಿತ್ತು. ಅಂದ್ಹಾಗೆ ಮಾರ್ಚ್‌ 01ರಂದು ಮಾಡ್ಕೊಂಡಿರೋ ಒಪ್ಪಂದದಲ್ಲಿ ಭಾರತ ಯುಎಇಗೆ 14,400 ಮೆಟ್ರಿಕ್‌ ಟನ್‌ಗಳಷ್ಟು ಈರುಳ್ಳಿ ನೀಡಿತ್ತು. ಇದೀಗ ಹೆಚ್ಚುವರಿ ಈರುಳ್ಳಿಯನ್ನ ಯುಎಇಗೆ ಪೂರೈಕೆ ಮಾಡಿ, ಈ ಶ್ರೀಲಂಕಕ್ಕೂ ಈರುಳ್ಳಿ ನೀಡೋಕೆ ಯೋಜಿಸಿದೆ.

-masthmagaa.com

Contact Us for Advertisement

Leave a Reply