ಕಡಲ ಭದ್ರತೆ ಹೆಚ್ಚಿಸಲು ಭಾರತ ಮತ್ತು ಥೈಲ್ಯಾಂಡ್‌ ಮಾತುಕತೆ!

masthmagaa.com:

ಹಿಂದು ಮಹಾಸಾಗರದಲ್ಲಿ ನೌಕಾ ಶಕ್ತಿ ಹೆಚ್ಚು ಮಾಡೋಕೆ ಇದೀಗ ಭಾರತ ಥೈಲ್ಯಾಂಡ್‌ ಜೊತೆ ಮೀಟಿಂಗ್‌ ನಡೆಸಿದೆ. ನೌಕಾ ಸಹಕಾರ ಬಲಪಡಿಸಲು ಭಾರತದ ನೇವಲ್‌ ಸ್ಟಾಫ್‌ನ ಮುಖ್ಯಸ್ಥ ಅಡ್ಮಿರಲ್‌ ಆರ್‌ ಹರಿ ಕುಮಾರ್‌ ಮತ್ತು ಥೈನ ನೇವಲ್‌ ಸ್ಟಾಫ್‌ ಮುಖ್ಯಸ್ಥ ಅಡ್ಮಿರಲ್‌ ಎಡೂಂಗ್‌ ಪೈನ್‌-ಇಮ್‌ (Adoong Paan-Iam) ಮಾತುಕತೆ ನಡೆಸಿದ್ದಾರೆ. ಈ ವೇಳೆ ಹಿಂದು ಮಹಾಸಾಗರ, ಕೆಂಪು ಸಮುದ್ರ ಮತ್ತು ಏಡನ್‌ ಕೊಲ್ಲಿಯಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ಡಿಸ್‌ಕಸ್‌ ಮಾಡಲಾಗಿದೆ. ಜೊತೆಗೆ ಸಮುದ್ರದಲ್ಲಿ ಶಾಂತಿ, ಸ್ಥಿರತೆ ಕಾಪಾಡಿ…ಕಡಲ ಭದ್ರತೆ ಒದಗಿಸಲು ಒಟ್ಟಾಗಿ ಕೆಲಸ ಮಾಡೋ ಬಗ್ಗೇನೂ ಉಭಯ ದೇಶಗಳು ಮಾತುಕತೆ ನಡೆಸಿವೆ. ಅಂದ್ಹಾಗೆ ಥೈನ ಅಡ್ಮಿರಲ್‌ ಎಡೂಂಗ್‌ ಪೈನ್‌-ಇಮ್‌ ಅವ್ರು ಏಪ್ರಿಲ್‌ 1-3ರವರೆಗೆ ಭಾರತದ ಅಫಿಶಿಯಲ್‌ ಭೇಟಿಯಲ್ಲಿದ್ದಾರೆ.

-masthmagaa.com

Contact Us for Advertisement

Leave a Reply