ರಷ್ಯಾ-ಯುಕ್ರೇನ್‌ ಯುದ್ಧ ನಿಲ್ಲಿಸೋ ಸಭೆಯಲ್ಲಿ ಭಾರತ ಭಾಗಿ!

masthmagaa.com:

ಆಗಸ್ಟ್ 5 ಮತ್ತು 6 ರಂದು ಸೌದಿ ಅರೇಬಿಯಾ ಅಯೋಜಿಸಿರುವ ಯುಕ್ರೇನ್ ಶಾಂತಿ ಮಾತುಕತೆ ಸಭೆಯಲ್ಲಿ ಭಾರತ ಪಾಲ್ಗೊಳ್ಳಲಿದೆ ಅಂತ ವಿದೇಶಾಂಗ ಸಚಿವಾಲಯ ತಿಳಿಸಿದೆ. ಜೆಡ್ಡಾದಲ್ಲಿ ನಡೆಯಲಿರುವ ಸಭೆಗೆ ಭಾರತಕ್ಕೆ ಅಮಂತ್ರಣ ನೀಡಲಾಗಿದೆ ಹೀಗಾಗಿ ಭಾರತ ಈ ಸಭೆಯಲ್ಲಿ ಭಾಗವಹಿಸಲಿದೆ. ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಮುಂದಿನ ದಾರಿ ಎಂಬ ನಮ್ಮ ದೀರ್ಘಕಾಲದ ನಿಲುವಿಗೆ ನಮ್ಮ ಭಾಗವಹಿಸುವಿಕೆ ಅನುಗುಣವಾಗಿದೆ ಅಂತ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ತಿಳಿಸಿದ್ದಾರೆ. ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ಅವರ ಪ್ರಸ್ತಾವದ ಮೇರೆಗೆ ವರ್ಷದ ಆರಂಭದಲ್ಲಿ ಸೌದಿ ಅರೇಬಿಯಾ ಭಾರತದ ಸೇರಿದಂತೆ ಬ್ರೆಜಿಲ್‌, ಚೀನಾ, ಅಮೆರಿಕ, ಯುಕ್ರೇನ್‌ ಹಾಗು ಪ್ರಮುಖ ಅಭಿವೃದ್ಧಿಶೀಲ ಪಾಶ್ಚಿಮಾತ್ಯ ರಾಷ್ಟ್ರಗಳನ್ನ ಈ ಸಭೆಗೆ ಆಹ್ವಾನಿಸಿತ್ತು. ಆದ್ರೆ ರಷ್ಯಾಗೆ ಇದ್ರಲ್ಲಿ ಆಹ್ವಾನ ಇಲ್ಲ… ಭಾರತದ ಪರವಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವ್ರು ಸಭೆಯಲ್ಲಿ ಹಾಜರಾಗಲಿದ್ದಾರೆ ಅನ್ನೋ ಮಾಹಿತಿ ಇದೆ. ಅತ್ತ ಅಮೆರಿಕದ NSA ಜೇಕ್‌ ಸಲ್ಲಿವನ್‌ ಹಾಗು ಇತರ ದೇಶಗಳ ಟಾಪ್‌ ಸೆಕ್ಯುರಿಟಿ ಅಧಿಕಾರಿಗಳು ಕೂಡ ಭಾಗಿಯಾಗಲಿದ್ದಾರೆ. ಜೆಡ್ಡಾದ ಈ ಶಾಂತಿ ಸಭೆ ಜೆಲೆನ್‌ಸ್ಕಿ ಅವ್ರ ಪೀಸ್‌ ಪ್ಲಾನ್‌ ಮೇಲೆ ಫೋಕಸ್‌ ಮಾಡಲಿದೆ ಅಂತ ಯುಕ್ರೇನ್‌ ಅಧ್ಯಕ್ಷರ ಮುಖ್ಯ ಸಿಬ್ಬಂದಿ ಆ್ಯಂಡ್ರಿ ಯೆರ್ಮ್ಯಾಕ್‌ ಹೇಳಿದ್ದಾರೆ. ಈ ಶಾಂತಿ ಯೋಜನೆಯಲ್ಲಿ ರಷ್ಯಾ ಪಡೆಗಳನ್ನ ಹಿಂಪಡೆಯೋದು, ಸೋವಿಯತ್‌ ನಂತರದ ಗಡಿಗಳನ್ನ ಮರುಸ್ಥಾಪಿಸೋದು, ಯುದ್ಧಾಪರಾಧಗಳಿಗೆ ರಷ್ಯಾನ ಗುರಿ ಮಾಡೋದು, ಯುದ್ಧಖೈದಿಗಳ ಬಿಡುಗಡೆಯಂತಹ 10 ವಿಷಯಗಳಿವೆ. ಕಳೆದ ಬಾರಿಯ ಕೋಪನ್‌ಹೇಗನ್‌ ಸಭೆಯಲ್ಲೂ ಇದು ಪ್ರಸ್ತಾಪ ಆಗಿತ್ತು ಆದರೆ ರಷ್ಯಾ ಇದನ್ನ ರಿಜೆಕ್ಟ್‌ ಮಾಡಿತ್ತು.

-masthmagaa.com

Contact Us for Advertisement

Leave a Reply