ಶ್ರೀಲಂಕಾದ ಚಹಾ ತೋಟ ಪ್ರದೇಶಗಳಲ್ಲಿ 10 ಸಾವಿರ ಮನೆ ನಿರ್ಮಿಸಲಿದೆ ಭಾರತ!

masthmagaa.com:

ಶ್ರೀಲಂಕಾದ ಚಹಾ ತೋಟದ ಬಳಿ 10 ಸಾವಿರಕ್ಕೂ ಅಧಿಕ ಮನೆಗಳ ನಿರ್ಮಾಣಕ್ಕೆ ಭಾರತ ಮುಂದಾಗಿದೆ. ಭಾರತೀಯ ವಸತಿ ಯೋಜನೆಯ ಹಂತ 4ರ ಅಡಿಯಲ್ಲಿ ಶ್ರೀಲಂಕಾದ ಚಹಾ ತೋಟದ ಏರಿಯಾಗಳಲ್ಲಿ ಮನೆಗಳ ನಿರ್ಮಾಣಕ್ಕೆ ಭಾರತೀಯ ಹೈ ಕಮಿಷನ್‌ ಎರಡು ಮಹತ್ವದ ಅಗ್ರಿಮೆಂಟ್ಸ್‌ಗೆ ಸೈನ್‌ ಮಾಡಿದೆ. ಈ ಮನೆಗಳ ನಿರ್ಮಾಣಕ್ಕಾಗಿ ರಾಷ್ಟ್ರೀಯ ವಸತಿ ಅಭಿವೃದ್ಧಿ ಪ್ರಾಧಿಕಾರ ಮತ್ತು ರಾಜ್ಯ ಇಂಜಿನಿಯರಿಂಗ್‌ ಕಾರ್ಪೋರೇಷನ್‌ ಏಜೆನ್ಸಿಗಳೊಂದಿಗೆ ಸಪರೇಟ್‌ ಅಗ್ರಿಮೆಂಟ್‌ಗಳನ್ನ ಮಾಡಿಕೊಳ್ಳಲಾಗಿದೆ. ಇನ್ನು ಭಾರತೀಯ ವಸತಿ ಯೋಜನೆಯ 4ನೇ ಹಂತ ಶ್ರೀಲಂಕಾದ 11 ಜಿಲ್ಲೆಗಳು ಮತ್ತು 6 ಪ್ರಾಂತ್ಯಗಳಲ್ಲಿ ಜಾರಿಗೊಳಿಸಲಾಗಿದೆ. ಅಂದ್ಹಾಗೆ ಭಾರತೀಯ ವಸತಿ ಯೋಜನೆಯಡಿಯಲ್ಲಿ ಒಟ್ಟು 60 ಸಾವಿರ ಮನೆಗಳನ್ನ ನಿರ್ಮಿಸೋ ಗುರಿ ಹೊಂದಿದೆ. ಈ ಯೋಜನೆಯ ಮೊದಲೆರಡು ಹಂತಗಳಲ್ಲಿ ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಲ್ಲಿ 46 ಸಾವಿರ ಮನೆಗಳ ನಿರ್ಮಾಣ ಪೂರ್ಣಗೊಂಡಿವೆ. ಇನ್ನು ಮೂರನೇ ಹಂತದಲ್ಲಿ ತೋಟ ಪ್ರದೇಶಗಳಲ್ಲಿ 4 ಸಾವಿರ ಮನೆಗಳ ನಿರ್ಮಾಣ ಪೂರ್ಣಗೊಳ್ಳೋದ್ರಲ್ಲಿದೆ ಅಂತ ಪ್ರಕಟಣೆ ತಿಳಿಸಿದೆ.

-masthmagaa.com

Contact Us for Advertisement

Leave a Reply