ಚೀನಾದ ಆ್ಯಪ್‌ಗಳ ಬಳಿಕ, ಕರೆನ್ಸಿ ಮೇಲೆ ನಿರ್ಬಂಧ ಹೇರೋಕೆ ಮುಂದಾದ ಭಾರತ!

masthmagaa.com:

ಭಾರತದಲ್ಲಿ ಚೀನಾದ ಅನೇಕ ಆ್ಯಪ್‌ಗಳನ್ನ ಬ್ಯಾನ್ ಮಾಡಿರೊ ಕೇಂದ್ರ ಸರ್ಕಾರ ಇದೀಗ ಅದರ ಕರೆನ್ಸಿ ಮೇಲೂ ನಿರ್ಬಂಧ ಹೇರೋಕೆ ಮುಂದಾಗಿದೆ. ಬ್ಯಾಂಕ್‌ಗಳಿಗೆ ಹಾಗೂ ವ್ಯಾಪಾರಿಗಳಿಗೆ ಚೀನಾದ yuan ಕರೆನ್ಸಿ ಮೂಲಕ ಪಾವತಿ ಮಾಡದಂತೆ ಭಾರತ ಸರ್ಕಾರ ಸೂಚಿಸಿದೆ ಅಂತ ಸುದ್ದಿಯಾಗಿದೆ. ಚೀನಾದ ಜೊತೆಗಿನ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಷ್ಯಾದ ಆಮದುಗಳಿಗೆ ಪೇ ಮಾಡಲು ಚೀನಾ ಕರೆನ್ಸಿ ಬಳಸದಂತೆ ಸೂಚಿಸಲಾಗಿದೆ. ರಷ್ಯಾ ತೈಲದ ಟಾಪ್‌ ಖರೀದಿದಾರ ರಾಷ್ಟ್ರವಾಗಿರೊ ಭಾರತ, ಯುಎಇಯ ಕರೆನ್ಸಿ dirhams ಮೂಲಕ ವ್ಯಾಪಾರ ಮಾಡಲು ಪ್ರಿಫರ್‌ ಮಾಡುತ್ತೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಆದ್ರೆ ಚೀನಾದಿಂದ ವಸ್ತುಗಳನ್ನ ಖರೀದಿ ಮಾಡೋಕೆ ಹೆಲ್ಪ್‌ ಆಗುತ್ತೆ ಅಂತ ಚೀನಾದ ಕರೆನ್ಸಿಯಲ್ಲಿ ವ್ಯಾಪಾರ ಮಾಡೋಕೆ ರಷ್ಯಾ ಬಯಸುತ್ತೆ. ಆದ್ರೆ ಗಡಿ ಪ್ರದೇಶದಲ್ಲಿ ಚೀನಾ ಜೊತೆಗಿನ ಉದ್ವಿಗ್ನತೆಯಿಂದ ಚೀನಾ ಕರೆನ್ಸಿ ಬಳಸದಂತೆ ಪ್ಲ್ಯಾನ್‌ ಹಾಕಲಾಗ್ತಿದೆ. ಮುಂದಿನ ತಿಂಗಳುಗಳಲ್ಲಿ ಹೆಚ್ಚಿನ ವ್ಯವಹಾರ ಯುಎಇಯ dirhams ಕರೆನ್ಸಿಯಲ್ಲೇ ನಡೆಯಲಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಭಾರತದ ಈ ನಿರ್ಧಾರಕ್ಕೆ ಚೀನಾ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

-masthmagaa.com

Contact Us for Advertisement

Leave a Reply