masthmagaa.com:

ಎದುರಾಳಿಗಳ ಟ್ಯಾಂಕ್​ಗಳನ್ನು ಹೊಡೆದುರುಳಿಸಬಲ್ಲ ‘ನಾಗ್’ ಆ್ಯಂಟಿ-ಟ್ಯಾಂಕ್ ಗೈಡೆಡ್​ ಮಿಸೈಲ್​ನ ಅಂತಿಮ ಪ್ರಯೋಗವನ್ನು ಭಾರತ ಯಶಸ್ವಿಯಾಗಿ ಪೂರೈಸಿದೆ. ಈ ಮೂಲಕ ಭಾರತೀಯ ಸೇನೆಗೆ ಸೇರಲು ನಾಗ್​ ಕ್ಷಿಪಣಿ ರೆಡಿಯಾದಂತಾಗಿದೆ. ಇಂದು ಬೆಳಗ್ಗೆ 6.45ರ ಸುಮಾರಿಗೆ ರಾಜಸ್ಥಾನದ ಪೋಖ್ರಾನ್​ನಲ್ಲಿ ಈ ಕ್ಷಿಪಣಿಯ ಫೈನಲ್ ಟ್ರಯಲ್ ನಡೆಸಲಾಯ್ತು. ಈ ವೇಳೆ ಬಳಕೆಗೆ ಬಾರದ ಟ್ಯಾಂಕ್​ವೊಂದನ್ನು ‘ನಾಗ್’ ಕ್ಷಿಪಣಿ ಧ್ವಂಸಗೊಳಿಸಿದೆ. ಇದರ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ.

ಭಾರತ-ಚೀನಾ ನಡುವೆ ಲಡಾಖ್ ಪೂರ್ವಭಾಗದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ಬೆನ್ನಲ್ಲೇ ‘ನಾಗ್’ ಕ್ಷಿಪಣಿಯ ಅಂತಿಮ ಪ್ರಯೋಗ ಯಶಸ್ವಿಯಾಗಿರೋದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. 20 ಕಿ.ಮೀ. ದೂರದ ಟಾರ್ಗೆಟ್​ನ್ನು ಧ್ವಂಸಗೊಳಿಸುವ ಸಾಮರ್ಥ್ಯ ಈ ಕ್ಷಿಪಣಿಗಿದೆ. ಇದನ್ನು ಡಿಆರ್​ಡಿಒ ಅಭಿವೃದ್ಧಿಪಡಿಸಿದ್ದು, ಈ ಕ್ಷಿಪಣಿಗೆ ‘ಪ್ರಾಸ್ಪಿನಾ’ ಅಂತಾನೂ ಕರೆಯಲಾಗುತ್ತದೆ. ಇತ್ತೀಚೆಗಷ್ಟೇ ಹೆಲಿಕಾಪ್ಟರ್ ಮೂಲಕ ಉಡಾಯಿಸಬಲ್ಲ Stand-off Anti-Tank Missile (SANT) ಪರೀಕ್ಷೆ ಯಶಸ್ವಿಯಾಗಿತ್ತು. ಇದೀಗ ಯುದ್ಧ ಟ್ಯಾಂಕ್​ಗಳ ಮೂಲಕ ಹಾರಿಸಬಲ್ಲ ಕ್ಷಿಪಣಿಯ ಅಂತಿಮ ಪ್ರಯೋಗ ಕೂಡ ಯಶಸ್ವಿಯಾಗಿದೆ. ಕಳೆದ ಹಲವು ದಿನಗಳಿಂದ ಒಂದಾದಮೇಲೊಂದರಂತೆ ಕ್ಷಿಪಣಿಗಳನ್ನು ಪರೀಕ್ಷಿಸುತ್ತಿರುವ ಭಾರತ ಈ ಮೂಲಕ ಚೀನಾಗೆ ವಾರ್ನಿಂಗ್ ಕೊಡ್ತಿದೆ.

-masthmagaa.com

Contact Us for Advertisement

Leave a Reply