ಮುಂದಿನ ವರ್ಷ ಬರಲಿವೆ ಅಮೆರಿಕದ ಹಂಟರ್‌ ಡ್ರೋನ್‌ಗಳು! ಏನಿದರ ವಿಶೇಷತೆ?

masthmagaa.com:

2024ರ ಆರಂಭದಲ್ಲಿ ಅಮೆರಿಕದ ‘hunter-killer’ ಅಂತ ಕರೆಸಿಕೊಂಡಿರೊ MQ-9B ಪ್ರಿಡೇಟರ್‌ ಡ್ರೋನ್‌ಗಳನ್ನ ಭಾರತ ತನ್ನ ಸೈನ್ಯಕ್ಕೆ ಸೇರಿಸಿಕೊಳ್ಳಲಿದೆ. ಈ ಡೀಲ್‌ ಫೈನಲ್‌ ಮಾಡುವ ನಿಟ್ಟಿನಲ್ಲಿ ಉಭಯ ದೇಶಗಳು ಚರ್ಚೆ ನಡೆಸಿವೆ. 31 ಡ್ರೋನ್‌ಗಳನ್ನ 3 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 25 ಸಾವಿರ ಕೋಟಿ ವೆಚ್ಚದಲ್ಲಿ ಖರೀದಿಸೋಕೆ ಭಾರತ Letter of Request (LoR) ನೀಡಿದೆ ಅಂತ ತಿಳಿದು ಬಂದಿದೆ. ಅಮೆರಿಕದ ದೈತ್ಯ ಡಿಫೆನ್ಸ್‌ ಕಂಪನಿ ಜನರಲ್‌ ಅಟಾಮಿಕ್ಸ್‌ (GA) ಈ ಡ್ರೋನ್‌ಗಳನ್ನ ತಯಾರಿಸುತ್ತೆ. ಚೀನಾ ಗಡಿ ಅಂದ್ರೆ LACಯಲ್ಲಿ ಕಣ್ಗಾವಲು ಉಪಕರಣಗಳಾಗಿ ಇವುಗಳನ್ನ ನಿಯೋಜಿಸಲಾಗುತ್ತೆ ಎನ್ನಲಾಗಿದೆ. ಅಂದ್ಹಾಗೆ ಈ ತಿಂಗಳ ಆರಂಭದಲ್ಲಿ ನಡೆದ 2+2 ಮೀಟಿಂಗ್‌ ವೇಳೆ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌, ಅಮೆರಿಕ ಡಿಫೆನ್ಸ್‌ ಸೆಕ್ರೆಟರಿ ಲಾಯ್ಡ್‌ ಆಸ್ಟಿನ್‌ ಜೊತೆ ಡ್ರೋನ್‌ಗಳ ವಿಚಾರವಾಗಿ ಮಾತುಕತೆ ನಡೆಸಿದ್ರು. ಈ ಬೆನ್ನಲ್ಲೇ ಈ ಡೀಲ್‌ ಫೈನಲೈಸ್‌ ಆಗೋ ತರ ಕಾಣ್ತಾ ಇದೆ.

-masthmagaa.com

Contact Us for Advertisement

Leave a Reply