ಭಾರತ-ಅಮೆರಿಕ ಸ್ಪೇಸ್‌ ಪ್ರಾಜೆಕ್ಟ್‌ ʻನಿಸಾರ್‌ʼ ಸಿದ್ದ! ಲಾಂಚ್‌ ಯಾವಾಗ?

masthmagaa.com:

ಇಸ್ರೋ (ISRO) ಹಾಗೂ ನಾಸಾ (NASA) ಜಂಟಿಯಾಗಿ ಅಭಿವೃದ್ಧಿಪಡಿಸಿರೋ ಉಪಗ್ರಹ ʻನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ʼ (NISAR) ಮುಂದಿನ ವರ್ಷ ಲಾಂಚ್‌ ಆಗೋಕೆ ಸಜ್ಜಾಗಿದೆ. ಇಸ್ರೋದ compact antenna test facility ಯಲ್ಲಿ ಈ ಉಪಗ್ರಹದ ಪ್ರಮುಖ ಟೆಸ್ಟ್‌ಗಳನ್ನ ಕೂಡ ಯಶಸ್ವಿಯಾಗಿ ನಡೆಸಲಾಗಿದೆ ಅಂತ ನಾಸಾ ಹೇಳಿಕೊಂಡಿದೆ. ಇಸ್ರೋ-ನಾಸಾ ಅಭಿವೃದ್ಧಿ ಪಡಿಸುತ್ತಿರೋ ಉಪಗ್ರಹ ನಿಸಾರ್‌ ಇಡೀ ಭೂಮಿಯನ್ನ 12 ದಿನಗಳಲ್ಲಿ ನಕ್ಷೆ ಮಾಡುತ್ತೆ. ಇದ್ರ ಸಹಾಯದಿಂದ ಗ್ರಹದ ಪರಿಸರ ವ್ಯವಸ್ಥೆ, ಮಂಜುಗಡ್ಡೆಯ ದ್ರವ್ಯರಾಶಿ, ಸಸ್ಯವರ್ಗ, ಸಮುದ್ರ ಮಟ್ಟ ಏರಿಕೆ, ಅಂತರ್ಜಲ ಮಟ್ಟ ಮತ್ತು ನೈಸರ್ಗಿಕ ಅಪಾಯಗಳಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಸ್ಥಿರವಾದ ಡೇಟಾ ಸಿಗುತ್ತೆ. ಭೂಕಂಪಗಳು, ಸುನಾಮಿಗಳು, ಜ್ವಾಲಾಮುಖಿ ಸ್ಫೋಟಗಳು ಮತ್ತು ಭೂಕುಸಿತ ಬಗ್ಗೆಯೂ ಮಹತ್ವದ ಡೇಟಾ ಲಭ್ಯವಾಗುತ್ತೆ ಅಂತ ನಾಸಾ ಹೇಳಿದೆ.

-masthmagaa.com

Contact Us for Advertisement

Leave a Reply