ವಿಶ್ವಸಂಸ್ಥೆಯಲ್ಲಿ ಗುಡುಗಿದ ಭಾರತ! ಸಮಗ್ರ ಸುಧಾರಣೆಗೆ ಒತ್ತಾಯ!

masthmagaa.com:

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನ ತಮ್ಮ ಜಾಗೀರಿನ ರೀತಿ ಮಾಡ್ಕೊಂಡಿರೋ ಐದು ಶಾಶ್ವತ ಸದಸ್ಯ ರಾಷ್ಟ್ರಗಳು ಅಂದ್ರೆ ಅಮೆರಿಕ, ಚೀನಾ, ಫ್ರಾನ್ಸ್‌, ರಷ್ಯಾ, ಬ್ರಿಟನ್‌ ವಿರುದ್ದ ಭಾರತ ಬೆಂಕಿ ಕಾರಿದೆ. ʻʻಜಾಗತಿಕ ವಿಚಾರಗಳನ್ನ ನಿರ್ಧಾರ ಮಾಡೋ ಹಕ್ಕು ಕೇವಲ ಈ 5 ರಾಷ್ಟ್ರಗಳಿಗಿರೋದು ಸರಿಯಲ್ಲ..ಪ್ರತಿಯೊಂದು ರಾಷ್ಟ್ರಕ್ಕೆ ಅದ್ರ ಸೈಜ್‌ ಅಥ್ವಾ ಅದ್ರ ಪವರ್‌ ಲೆಕ್ಕಿಸದೇ ಸಮಾನವಾದ ಅವಕಾಶ ನೀಡಬೇಕು. ಇನ್ನೆಷ್ಟು ದಿನಗಳ ಕಾಲ ಈ 5 ಐದು ಜನರ ಅಂಕೆಯಲ್ಲಿ ಜಗತ್ತು ಇರಬೇಕುʼ ಅಂತ ಭಾರತದ ರಾಯಭಾರಿ ರುಚಿರಾ ಕಾಂಭೋಜ್‌ ವಿಶ್ವಸಂಸ್ಥೆಯಲ್ಲಿ ಗುಡುಗಿದ್ದಾರೆ. ʻʻಕೇವಲ 5 ರಾಷ್ಟ್ರಗಳು 188 ರಾಷ್ಟ್ರಗಳ ದನಿಯಾಗೋಕೆ ಸಾಧ್ಯನಾ? ಜಾಗತಿಕ ಸಮಸ್ಯೆಗಳಿಗೆ 5 ರಾಷ್ಟ್ರಗಳು ಮಾತ್ರ ಪರಿಹಾರ ಕೊಡ್ತವಾ? ಜಗತ್ತಿನ ಮೇಲೆ ಇನ್ನೆಷ್ಟು ದಿನ ಹಕ್ಕು ಚಲಾಯಿಸ್ತೀರಿ? ಇದು ಜಗತ್ತಿಗೆ ನೀವು ಮಾಡ್ತಿರೋ ಅನ್ಯಾಯ. ಗ್ಲೋಬಲ್‌ ಸೌತ್‌ ರಾಷ್ಟ್ರಗಳನ್ನ ನಿರ್ಲಕ್ಷಿಸೋದು ಸರಿಯಲ್ಲ. ಇವೆಲ್ಲವೂ ಬದಲಾಗ್ಬೇಕು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸಮಗ್ರ ಸುಧಾರಣೆ ಆಗ್ಲೇಬೇಕುʼ ಅಂತ ರುಚಿರಾ ಕಾಂಬೋಜ್ ಒತ್ತಾಯಿಸಿದ್ದಾರೆ. ಅಂದ್ಹಾಗೆ ಮೊನ್ನೆಯಷ್ಟೇ ಭಾರತದ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಭಾರತ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯ ಸ್ಥಾನ ಪಡೆಯುತ್ತೆ. ಆದ್ರೆ ಆ ಹಾದಿ ಕಷ್ಟ ಇದೆ ಅಂತ ಹೇಳಿದ್ರು. ಇನ್ನು ಅದಕ್ಕೂ ಮುಂಚೆ ಎಲಾನ್‌ ಮಸ್ಕ್‌ ಕೂಡ ʻಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಸಿಗಬೇಕುʼ ಅಂತ ಹೇಳಿದ್ರು. ಈ ನಡುವೆಯೇ ಈಗ ಮತ್ತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿರುದ್ದ ಭಾರತ ಕಿಡಿಕಾರಿದೆ. ವಿಶ್ವಸಂಸ್ಥೆಯ ಪವರ್‌ ಸೆಂಟರ್‌ ಅಂತ ಕರೆಸಿಕೊಂಡಿರೋ ಈ ಸೆಕ್ಯುರಿಟಿ ಕೌನ್ಸಿಲ್‌ನಲ್ಲಿ ಶಾಶ್ವತ ಸದಸ್ಯತ್ವ ಪಡಿಬೇಕು ಅಂತ ಭಾರತ ಈ ಹಿಂದಿನಿಂದಲೂ ಪ್ರಯತ್ನ ಮಾಡ್ತಾ ಬಂದಿತ್ತು. ಅದಕ್ಕಾಗಿ ಜಿ 4 ಅಂದ್ರೆ ಭಾರತ ಜಪಾನ್‌ ಜರ್ಮನಿ ಹಾಗೂ ಬ್ರೆಜಿಲ್‌ಗಳನ್ನ ಸೇರಿದಂತೆ ಒಂದು ಕೂಟ ರಚಿಸಲಾಗಿದೆ. ಇಷ್ಟಾದ್ರೂ ಆ ಐದು ದೇಶಗಳನ್ನ ಹೊರತುಪಡಿಸಿ ಬೇರೆಯವರು ಸದಸ್ಯರಾಗೋಕೆ ಇದುವರೆಗೂ ಅಂತ ಕ್ರಮಗಳೇನೂ ಆಗಿಲ್ಲ.

-masthmagaa.com

Contact Us for Advertisement

Leave a Reply