3ನೇ ಟೆಸ್ಟ್​: ಮೊದಲ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ 166/2

masthmagaa.com:

ಭಾರತ-ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯ ಇವತ್ತಿನಿಂದ ಸಿಡ್ನಿಯಲ್ಲಿ ಆರಂಭವಾಗಿದೆ. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್​ ಕಳೆದುಕೊಂಡು 166 ರನ್ ಮಾಡಿದೆ. ಆಸ್ಟ್ರೇಲಿಯಾ ಪರ ಪುಕೋಸ್ಕಿ ಮತ್ತು ಲಬುಶೇನ್​ ಅರ್ಧಶತಕ ಸಿಡಿಸಿ ಮಿಂಚಿದ್ರು. ಭಾರತದ ಪರ ನವದೀಪ್ ಸೈನಿ ಮತ್ತು ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್​ ಪಡೆದ್ರು. ಲಬುಶೇನ್​ 67 ಮತ್ತು ಸ್ಟೀವ್ ಸ್ಮಿತ್​ 31 ರನ್​ಗಳೊಂದಿಗೆ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇವತ್ತಿನ ಆಟದಲ್ಲಿ 4 ಗಂಟೆ ಆಟವನ್ನ ಮಳೆ ಆಹುತಿ ಪಡೀತು.

-masthmagaa.com

Contact Us for Advertisement

Leave a Reply