ಕುತೂಹಲ ಕೆರಳಿಸಿದ 3ನೇ ಟೆಸ್ಟ್: 4ನೇ ದಿನದ ಅಂತ್ಯಕ್ಕೆ ಭಾರತ 98/2

masthmagaa.com:

ಭಾರತ-ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ನಡೀತಿರುವ 3ನೇ ಟೆಸ್ಟ್​ ಕುತೂಹಲಕಾರಿ ಘಟ್ಟ ತಲುಪಿದೆ. ಆಸ್ಟ್ರೇಲಿಯಾ ನೀಡಿದ 407 ರನ್ ಟಾರ್ಗೆಟ್​ ಬೆನ್ನತ್ತಿದ ಭಾರತ 4ನೇ ದಿನದಾಟದ ಅಂತ್ಯಕ್ಕೆ 98 ರನ್​ಗೆ 2 ವಿಕೆಟ್ ಕಳೆದುಕೊಂಡಿದೆ. ರೋಹಿತ್ ಶರ್ಮಾ 52 ಮತ್ತು ಶುಬ್​ಮನ್​ ಗಿಲ್ 31 ರನ್ ಸಿಡಿಸಿ ಔಟಾಗಿದ್ದಾರೆ. ಚೇತೇಶ್ವರ ಪೂಜಾರ 9 ಮತ್ತು ನಾಯಕ ಅಜಿಂಕ್ಯ ರಹಾನೆ 4 ರನ್​ಗಳೊಂದಿಗೆ 5ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಟೀಂ ಇಂಡಿಯಾ ಗೆಲ್ಲಲು ಕೊನೇ ದಿನವಾದ ನಾಳೆ 309 ರನ್ ಸೇರಿಸಬೇಕಿದೆ. ಆಸ್ಟ್ರೇಲಿಯಾ ಗೆಲ್ಲಲು 8 ವಿಕೆಟ್ ತೆಗೀಬೇಕಿದೆ. ಸೋ ಎರಡೂ ತಂಡಕ್ಕೂ ನಾಳೆ ಕ್ರೂಷಿಯಲ್ ಡೇ. ಇದಕ್ಕೂ ಮೊದಲು ನಿನ್ನೆ 2ನೇ ಇನ್ನಿಂಗ್ಸ್​ನಲ್ಲಿ 103 ರನ್​ಗೆ 2 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ಇವತ್ತು ಬ್ಯಾಟಿಂಗ್ ಮುಂದುವರಿಸಿ 312 ರನ್​ಗೆ 6 ವಿಕೆಟ್​ ಕಳೆದುಕೊಂಡಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡ್ತು. ಇದರೊಂದಿಗೆ ಭಾರತಕ್ಕೆ 407 ರನ್​ ಟಾರ್ಗೆಟ್ ನೀಡ್ತು. ಟೀಂ ಇಂಡಿಯಾ ಆಟಗಾರರು ಫೀಲ್ಡಿಂಗ್ ಮಾಡುವ ವೇಳೆ ಪ್ರೇಕ್ಷಕರು ನಿಂದನೆ ಮಾಡಿದ ಘಟನೆ ಇವತ್ತೂ ಕೂಡ ನಡೀತು. ಬಳಿಕ ಒಂದಷ್ಟು ಜನ ಪ್ರೇಕ್ಷಕರನ್ನ ಹೊರಗೆ ಕಳಿಸಲಾಯ್ತು.

ಆಸ್ಟ್ರೇಲಿಯಾ: 338 & 312/6

ಭಾರತ: 244 & 98/2

-mathmagaa.com

Contact Us for Advertisement

Leave a Reply