ಕೊರೋನ ಸ್ಫೋಟ! ಭಾರತ-ಇಂಗ್ಲಂಡ್ 5ನೇ ಟೆಸ್ಟ್ ಮ್ಯಾಚ್‌ ಕ್ಯಾನ್ಸಲ್!

masthmagaa.com:

ಭಾರತ ಇಂಗ್ಲೆಂಡ್ ನಡುವಿನ ಕಡೆಯ ಹಾಗೂ 5ನೇ ಟೆಸ್ಟ್ ಪಂದ್ಯ ಕೊರೋನ ಕಾರಣ ರದ್ದಾಗಿದೆ. ಭಾರತ ತಂಡದ ಪ್ಲೇಯಿಂಗ್ ಇಲವೆನ್ ಆಟಗಾರಿಗೆ ಎಲ್ಲರಿಗೂ ನೆಗೆಟಿವ್ ಬಂದಿತ್ತು. ಆದ್ರೆ ತಂಡ ಅಂದ್ರೆ ಅದರಲ್ಲಿ ಕೋಚ್ ಸೇರಿ ಸಪೋರ್ಟ್ ಸ್ಟಾಫ್, ಎಕ್ಸ್ಟ್ರಾ ಪ್ಲೇಯರ್ಸ್ ಕೂಡ ಇರ್ತಾರೆ. ಮೊದಲಿಗೆ ನಾಲ್ಕನೇ ಟೆಸ್ಟ್ ವೇಳೆ ಮೂವರು ಸಪೋರ್ಟ್ ಸ್ಟಾಫ್ ಗೆ ಕೊರೋನ ಬಂತು. ಆಮೇಲೆ ಹೆಡ್ ಕೋಚ್ ರವಿ ಶಾಸ್ತ್ರಿಗೆ ಕೊರೋನ ಬಂತು. ಆಮೇಲೆ ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಕೂಡ ಕೊರೋನಗೆ ತುತ್ತಾದ್ರು. ಇವತ್ತು ಇನ್ನೇನು 5ನೇ ಟೆಸ್ಟ್ ಮ್ಯಾಚ್ ಶುರು ಆಗ್ಬೇಕಾಗಿತ್ತು. ಆದ್ರೆ ಜಸ್ಟ್ ಹಿಂದಿನ ರಾತ್ರಿ ಮತ್ತೊಬ್ಬ ಆಡಗಾರನಿಗೆ ಕೊರೋನ ಬಂದಿದೆ ಅಂತ ವರದಿಯಾಗಿದೆ. ಈ ರೀತಿ ಭಾರತೀಯ ಕ್ಯಾಂಪ್ ನಲ್ಲಿ ಕರೋನ ಸ್ಫೋಟ ಆಗ್ತಿರೋ ಪರಿಣಾಮ ತಂಡದ ಆಟಗಾರರು ಆಡಲು ಹಿಂದೇಟು ಹಾಕಿದ್ದಾರೆ. ಇದೇ ಕಾರಣಕ್ಕೆ ಇಂಗ್ಲಡ್ ಕ್ರಿಕೆಟ್ ಬೋರ್ಡ್ ECB ಸಂಪರ್ಕಿಸಿದ BCCI ನಾವು 5ನೇ ಟೆಸ್ಟ್ ಗೆ ತಂಡ ಇಳಿಸಲು ಸಾಧ್ಯ ಇಲ್ಲ ಅಂತ ಹೇಳಿದೆ. ಸಾಕಷ್ಟು ಮಾತುಕತೆ ನಡೆಸಲಾಯ್ತಾದ್ರೂ ಪೋಸ್ಟ್ ಪೋನ್ ಮಾಡೋಕೆ ಆಗಲಿಲ್ಲ. ಕ್ಯಾನ್ಸಲ್ಲೇ ಮಾಡಬೇಕಾಯಿತು. ಆದ್ರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಬಿಸಿಸಿಐ, ನಮ್ಮ ಹಾಗೂ ECB ಸಂಬಂಧ ಚೆನ್ನಾಗಿದೆ. ಹೀಗಾಗಿ ಈ ಮ್ಯಾಚ್ ರಿ ಶೆಎಡ್ಯೂಲ್ ಮಾಡೋಕೆ ಟ್ರೈ ಮಾಡ್ತೀವಿ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply