ಆಟಗಾರರಿಗೆ ಎಲ್ಲಿದೆ ರಕ್ಷಣೆ..? ಸುನೀಲ್ ಗವಾಸ್ಕರ್ ಕೆಂಡ

ಭಾರತ-ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ಅಭಿಮಾನಿಯೊಬ್ಬ ಓಡಿಬಂದು ರೋಹಿತ್ ಶರ್ಮಾ ಕಾಲಿಗೆ ಬಿದ್ದಿದ್ದು ನಿಮಗೆಲ್ಲಾ ಗೊತ್ತೇ ಇದೆ. ಆದ್ರೆ ಈ ಸಮಯದಲ್ಲಿ ಕಾಮೆಂಟರಿ ಮಾಡುತ್ತಿದ್ದ ಸುನೀಲ್ ಗವಾಸ್ಕರ್ ಸಿಟ್ಟಾಗಿದ್ದಾರೆ. ಭದ್ರತಾ ಸಿಬ್ಬಂದಿ ಜನರನ್ನು ನಿಯಂತ್ರಿಸುವ ಬದಲು ಮ್ಯಾಚ್ ನೋಡುತ್ತಾ ಕುಳಿತಿರುತ್ತಾರೆ. ಹೀಗಾಗಿಯೇ ಇಂತಹ ಘಟನೆಗಳು ನಡೆಯುತ್ತವೆ. ಇದು ಭಾರತದಲ್ಲಿ ದೀರ್ಘಕಾಲದಿಂದಲೂ ಇರೋ ಒಂದು ಸಮಸ್ಯೆ ಎಂದಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಸೆಕ್ಯೂರಿಟಿ ಸಿಬ್ಬಂದಿ ಫ್ರೀಯಾಗಿ ಮ್ಯಾಚ್ ನೋಡಲು ಬಂದಿರುವುದಿಲ್ಲ. ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಅವರು ಇರೋದು ಎಂದು ಸಿಟ್ಟಿಗೆದ್ದಿದ್ದಾರೆ. ಸಿಸಿಟಿವಿ ಹಾಕಿ ಅದರ ಮೂಲಕ ಸೆಕ್ಯೂರಿಟಿ ಸಿಬ್ಬಂದಿ ಪಂದ್ಯ ನೋಡ್ತಿದ್ದಾರಾ..? ತಮ್ಮ ಕೆಲಸ ಮಾಡ್ತಿದ್ದಾರಾ ಅಂತ ಚೆಕ್ ಮಾಡಬೇಕು. ಈ ರೀತಿಯಾದ್ರೆ ಯಾರು ಬೇಕಾದ್ರು ಮೈದಾನಕ್ಕೆ ಹೋಗಿ ಆಟಗಾರರಿಗೆ ಹಾನಿ ಮಾಡಬಹುದು. ಈ ಹಿಂದೆಯೂ ಇಂತಹ ಘಟನೆಗಳು ನಡೆದಿದೆ ಎಂದಿದ್ದಾರೆ.

Contact Us for Advertisement

Leave a Reply