ಮುಂದೊಂದು ದಿನ ಇಡೀ ಕಾಶ್ಮೀರ ಭಾರತದ ವಶವಾಗುತ್ತೆ: ವಾಯುಸೇನೆ ಕಮಾಂಡರ್

masthmagaa.com:

ವಾಯುಸೇನೆಯ ಹಿರಿಯ ಕಮಾಂಡರ್ ಒಬ್ಬರು ಇಡೀ ಕಾಶ್ಮೀರವನ್ನೇ ವಶಕ್ಕೆ ಪಡೆಯೋ ಮಾತಾಡಿದ್ದಾರೆ. ಜಮ್ಮು ಕಾಶ್ಮೀರದ ಬಡ್ಗಾಂನಲ್ಲಿ ಮಾತಾಡಿದ ವೆಸ್ಟರ್ನ್​ ಏರ್ ಕಮಾಂಡ್​​ನ ಏರ್ ಮಾರ್ಷಲ್ ಅಮಿತ್ ದೇವ್​​, ಸದ್ಯಕ್ಕೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆಯಲು ಯಾವುದೇ ಪ್ಲಾನ್ ಇಲ್ಲ. ಆದ್ರೆ ಮುಂದೊಂದು ಇಡೀ ಕಾಶ್ಮೀರ ನಮ್ಮ ವಶಕ್ಕೆ ಬರುತ್ತೆ ಅಂತ ಹೇಳಿದ್ದಾರೆ. ಜೊತೆಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರೋ ಜನರನ್ನು ಪಾಕಿಸ್ತಾನ ಸರಿಯಾದ ರೀತಿಯಲ್ಲಿ ನಡೆಸಿಕೊಳ್ತಿಲ್ಲ ಅಂತಲೂ ಬೇಸರ ವ್ಯಕ್ತಪಡಿಸಿದ್ಧಾರೆ. ಅಂದಹಾಗೆ ಕಾಶ್ಮೀರದ ರಾಜ ಹರಿಸಿಂಗ್ ಭಾರತದ ಒಕ್ಕೂಟಕ್ಕೆ ಸೇರಲು ಸಹಿ ಹಾಕಿದ ಬಳಿಕ 1947ರಲ್ಲಿ ಇದೇ ದಿನದಂದು ಕಾಶ್ಮೀರಕ್ಕೆ ಭಾರತದ ಸೇನೆ ಇಳಿದಿತ್ತು.

-masthmagaa.com

Contact Us for Advertisement

Leave a Reply