ಟೀಂ ಇಂಡಿಯಾ ಟಿ-20 ನಾಯಕಿ ಹರ್ಮನ್​ಪ್ರೀತ್​ಗೆ ಕೊರೋನಾ

masthmagaa.com:

ಭಾರತದ ಟಿ-20 ಮಹಿಳಾ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್​ಗೆ ಕೊರೋನಾ ಪಾಸಿಟಿವ್ ಬಂದಿದೆ. ಸದ್ಯ ಅವರು ಹೋಂ ಕ್ವಾರಂಟೈನ್​ನಲ್ಲಿದ್ದಾರೆ. ಆದ್ರೆ ಅವರಿಗೆ ಸೋಂಕು ತಗುಲಿದ್ದು ಹೇಗೆ ಅನ್ನೋದು ಇನ್ನೂ ಗೊತ್ತಾಗಿಲ್ಲ. ಹರ್ಮನ್​ಪ್ರೀತ್​ ಕೌರ್ ಇತ್ತೀಚೆಗಷ್ಟೇ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಂಡಿದ್ರು. ಈ ಸರಣಿಯನ್ನ ಭಾರತ 4-1ರಿಂದ ಸೋತಿತ್ತು.
ಇನ್ನು ರೋಡ್​ ಸೇಫ್ಟಿ ವರ್ಲ್ಡ್​ ಸಿರೀಸ್​ನಲ್ಲಿ ಇಂಡಿಯಾ ಲೆಜೆಂಡ್ಸ್ ಪರ ಆಡಿದ್ದ ಸಚಿನ್ ತೆಂಡೂಲ್ಕರ್, ಯುಸುಫ್ ಪಠಾನ್, ಇರ್ಫಾನ್ ಪಠಾನ್​, ಎಸ್​. ಬದ್ರಿನಾಥ್​ಗೆ ಸೋಂಕು ದೃಢಪಟ್ಟಿತ್ತು. ಪ್ರೇಕ್ಷಕರ ಉಪಸ್ಥಿತಿಯಲ್ಲಿ ಛತ್ತೀಸ್​ಗಢದ ರಾಯ್​ಪುರ್​ನಲ್ಲಿ ನಡೆದ ಈ ಸರಣಿಯನ್ನ ಇಂಡಿಯಾ ಲೆಜೆಂಡ್ಸ್ ಗೆದ್ದಿತ್ತು.

-masthmagaa.com

 

Contact Us for Advertisement

Leave a Reply