ಚೀನಾ ಮೇಲೆ ಹದ್ದಿನ ಕಣ್ಣಿಡಲು ಶಕ್ತಿಶಾಲಿ ಹೆರಾನ್‌ ಮಾರ್ಕ್‌-2 ಡ್ರೋನ್‌ ನಿಯೋಜಿಸಿದ ಭಾರತ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಚೀನಾ ಹಾಗೂ ಪಾಕಿಸ್ತಾನವನ್ನ ಕೌಂಟರ್‌ ಮಾಡೋಕೆ ಭಾರತ ಇಸ್ರೇಲ್‌ ಆಯುಧವನ್ನ ಗಡಿಯಲ್ಲಿ ನಿಯೋಜಿಸಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರೋ ಇಸ್ರೇಲ್‌ ನಿರ್ಮಿತ ಹೆರಾನ್ ಮಾರ್ಕ್ 2 ಡ್ರೋನ್ ಅನ್ನ ನಾರ್ಧನ್‌ ಸೆಕ್ಟರ್‌ನಲ್ಲಿ ನಿಯೋಜಿಸಲಾಗಿದೆ. ಇವುಗಳಲ್ಲಿ ದೂರಗಾಮಿ ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಅಳವಡಿಸಲಾಗಿದೆ. ಚೀನಾ ಮತ್ತು ಪಾಕಿಸ್ತಾನಕ್ಕೆ ಸಂಪರ್ಕವಿರೋ ಪ್ರದೇಶಗಳ ಮೇಲೆ ಇವು ಕಣ್ಣಿಡಲಿದ್ದು, ಒಮ್ಮೆ ಸಂಪೂರ್ಣ ಇಂಧನ ತುಂಬಿದ್ರೆ ದೀರ್ಘಕಾಲ ಹಾರಬಲ್ಲವು ಅಂತ ಅಧಿಕಾರಿಗಳು ಹೇಳಿದ್ದಾರೆ. ಅಲ್ದೇ ಭಾರತೀಯ ಸೇನೆಯಲ್ಲಿಯೇ ಇದು ಅತ್ಯಂತ ಶಕ್ತಿಶಾಲಿ ಡ್ರೋನ್‌ ಆಗಿದ್ದು ಉಪಗ್ರಹಕ್ಕೆ ಸಂಪರ್ಕ ಇರುವುದರಿಂದ ದೇಶದ ಯಾವುದೇ ಭಾಗದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಿ ಕಾರ್ಯಾಚರಣೆ ನಡೆಸಬಹುದು ಅಂತ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply