ಚೀನಾ-ಪಾಕಿಸ್ತಾನ ಗಡಿಯಲ್ಲಿ S-400 ಮಿಸೈಲ್‌ ನಿಯೋಜಿಸಿದ ಭಾರತ!

masthmagaa.com:

ದೇಶದ ಭದ್ರತೆಯನ್ನ ಇನ್ನಷ್ಟು ಸ್ಟ್ರಾಂಗ್‌ ಮಾಡಲು ಚೀನಾ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿ ಭಾರತೀಯ ವಾಯುಪಡೆ S-400 ಕ್ಷಿಪಣಿಯನ್ನ ನಿಯೋಜಿಸಿದೆ. ಜೊತೆಗೆ ದೇಶದ ರಕ್ಷಣಾ ವ್ಯವಸ್ಥೆಯನ್ನ ಬೂಸ್ಟ್‌ ಮಾಡೋದಕ್ಕೆ ಇನ್ನುಳಿದ ಎರಡು ಸ್ಕ್ವಾಡ್ರಾನ್‌ಗಳ ಡೆಲಿವರಿಯನ್ನ ಪೂರ್ಣಗೊಳಿಸಲು ಸದ್ಯದಲ್ಲೇ ಭಾರತ ರಷ್ಯಾದ ಅಧಿಕಾರಿಗಳನ್ನ ಭೇಟಿ ಮಾಡಲಿದ್ದಾರೆ ಅಂತ ವರದಿಯಾಗಿದೆ. ಇತ್ತ ಹಳೆದಾಗಿರೋ MiG-21 ಫೈಟರ್‌ ವಿಮಾನಕ್ಕೆ ಭಾರತೀಯ ವಾಯುಪಡೆ ವಿದಾಯ ಕೂಡ ಹೇಳಿದೆ. MiG-21 ಬದಲಿಗೆ ಸ್ಥಳೀಯ ಲಘು ಯುದ್ಧ ವಿಮಾನವಾದ (LCA) Mk-1Aನ್ನು ಅತೀ ಶೀಘ್ರದಲ್ಲಿ ಬಳಸೋದಾಗಿ IAF ಅಧಿಕಾರಿಗಳು ತಿಳಿಸಿದ್ದಾರೆ. ಆದ್ರಿಂದ MiG-21 ಯುದ್ಧ ವಿಮಾನವು ತನ್ನ ಕೊನೆಯ ಹಾರಾಟವನ್ನ ರಾಜಸ್ಥಾನದ ಉತ್ತರ್‌ಲಾಯಿ ನಗರದಲ್ಲಿ ನಡೆಸಿದೆ. ಅಂದ್ಹಾಗೆ MiG-21 ಯುದ್ಧ ವಿಮಾನ ಕಳೆದ 60 ವರ್ಷಗಳಿಂದ ದೇಶದ ಸೇವೆಯಲ್ಲಿ ಅತ್ಯುನ್ನತ ಕೊಡುಗೆ ನೀಡಿದೆ.

-masthmagaa.com

Contact Us for Advertisement

Leave a Reply