ಮೊದಲ ಬಾರಿ ಭಾರತ-ಚೀನಾ ಗಡಿಯಲ್ಲಿ ಹಾರಾಟ ನಡೆಸಿದ ರಫೇಲ್..!

masthmagaa.com:

ಫ್ರಾನ್ಸ್​ನಿಂದ ಭಾರತ ಖರೀದಿಸಿದ ಅತ್ಯಾಧುನಿಕ ರಫೇಲ್ ಫೈಟರ್​ ಜೆಟ್​​ಗಳು ಇದೇ ಮೊದಲ ಬಾರಿ ಭಾರತ-ಚೀನಾ ಗಡಿಯಲ್ಲಿ ಹಾರಾಟ ನಡೆಸಿವೆ. ಈ ಮೂಲಕ ಪದೇಪದೇ ಗಡಿಯಲ್ಲಿ ತಂಟೆ ಮಾಡ್ತಿರುವ ಚೀನಾಗೆ ಭಾರತ ಖಡಕ್ ವಾರ್ನಿಂಗ್ ಕೊಟ್ಟಿದೆ.

ಲಡಾಖ್​ನ ಮುಂಚೂಣಿ ವಾಯುನೆಲೆಯಿಂದ ಹಾರಾಟ ನಡೆಸಿದ ರಫೇಲ್, ಗಡಿಯಲ್ಲಿ ಗಸ್ತು ನಡೆಸಿದೆ ಅಂತ ಸೇನಾ ಮೂಲಗಳು ತಿಳಿಸಿವೆ. ಅಂದ್ಹಾಗೆ ಸೆಪ್ಟೆಂಬರ್ 10ರಂದು 5 ರಫೇಲ್ ಯುದ್ಧ ವಿಮಾನಗಳು ಅಧಿಕೃತವಾಗಿ ಭಾರತೀಯ ವಾಯುಸೇನೆಯನ್ನು ಸೇರ್ಪಡೆಯಾಗಿದ್ದವು.

-masthmagaa.com

Contact Us for Advertisement

Leave a Reply