ಉಗ್ರರು ಗಡಿ ನುಸುಳುತ್ತಿರುವ ವಿಡಿಯೋ ನೋಡಿ…

ಪಾಕಿಸ್ತಾನದಿಂದ ಉಗ್ರರು ನುಸುಳುತ್ತಿರುವ ಮತ್ತೊಂದು ವಿಡಿಯೋ ಬೆಳಕಿಗೆ ಬಂದಿದೆ. ಇದರಲ್ಲಿ ಉಗ್ರರು ಗಡಿ ನುಸುಳಲು ಯತ್ನಿಸುತ್ತಿರೋದು ಸ್ಪಷ್ಟವಾಗಿ ಕಾಣಿಸುತ್ತಿದೆ. ಜಮ್ಮು ಕಾಶ್ಮೀರದ ಕುಪ್ವಾರ ಬಳಿ ಗಡಿಯ ವಿಡಿಯೋ ಇದಾಗಿದೆ. ಈ ವೇಳೆ ಸೈನಿಕರು ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಉಗ್ರರೂ ಸಹ ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಕೊನೆಗೆ ಸೈನಿಕರ ದಾಳಿಗೆ ಕಂಗೆಟ್ಟು ವಾಪಸ್ ಓಡಿಹೋಗಿದ್ದಾರೆ. ಕದನ ವಿರಾಮ ಉಲ್ಲಂಘನೆ ಮೂಲಕ ಪಾಕಿಸ್ತಾನ ಸೇನೆ ಉಗ್ರರು ಗಡಿ ನುಸುಳಲು ಸಹಕರಿಸುತ್ತಿದೆ. ಗಡಿ ನುಸುಳಲು ಸುಮಾರು 500 ಮಂದಿ ಉಗ್ರರು ಕಾದು ಕುಳಿತಿದ್ದಾರೆ ಅಂತ ಇತ್ತೀಚೆಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದರು.

Contact Us for Advertisement

Leave a Reply